ನ್ಯೂಸ್ ನಾಟೌಟ್: ದುಬೈನ ಐಷಾರಾಮಿ ರೆಸ್ಟೋರೆಂಟ್ ಒಂದರಲ್ಲಿ 1 ಕಪ್ ಬೇಳೆ ಸಾರು ಸವಿಯಲು 25 ಸಾವಿರ ರೂಪಾಯಿ ಪಾವತಿಸಬೇಕು ಎನ್ನುವುದು ಅಚ್ಚರಿಯ ಸಂಗತಿ. ಯಾಕಿಷ್ಟು ದುಬಾರಿ? ಏನಿದರ ವಿಶೇಷತೆ ಗೊತ್ತಾ?
ವೈಟ್ ರೈಸ್ಗೆ ಸೂಪರ್ ಕಾಂಬಿನೇಶನ್ ಎಂದರೆ ಅದು ಬೇಳೆ ಸಾರು.10 ರಿಂದ 15 ನಿಮಿಷಗಳಲ್ಲಿ ತಯಾರಿಸಲಾಗುವ ಬೇಳೆ ಸಾರನ್ನು ಕಡಿಮೆ ಅಂದರೆ ವಾರದಲ್ಲಿ 2ರಿಂದ 3ಸಲವಾದರೂ ಮಾಡುವುದುಂಟು. ಹೊರಗಡೆ ಹೋಟೆಲ್ಗಳಲ್ಲಿ ಅನ್ನದೊಂದಿಗೆ ಸಿಗುವ ಈ ದಾಲ್ಗೆ 10 ರಿಂದ 20 ರೂಪಾಯಿ ಇರಬಹುದು. ಆದರೆ ಎಂದಾದರೂ 25 ಸಾವಿರ ರೂಪಾಯಿಯಷ್ಟು ಬೆಲೆ ಬಾಳುವ ಬೇಳೆ ಸಾರಿನ ಮಾಹಿತಿ ಇಲ್ಲಿದೆ.
ಈ ವೈರಲ್ ವೀಡಿಯೊವನ್ನು mr.random4090 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ಈ ಬೇಳೆ ಸಾರನ್ನು’24 ಕ್ಯಾರೆಟ್ ಗೋಲ್ಡ್ ದಾಲ್ ಫ್ರೈ’ ಎಂದು ಕರೆಯಲಾಗುತ್ತದೆ. ಈ ಖಾದ್ಯ ದುಬೈನಲ್ಲಿ ಸಾಕಷ್ಟು ಐಷಾರಾಮಿ ಹೋಟೆಲ್ನಲ್ಲಿ ಲಭ್ಯವಿದೆ.
https://www.instagram.com/reel/C1hT9UirUEf/?utm_source=ig_web_copy_link&igsh=MzRlODBiNWFlZA==
ಇದು ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವ ದಾಲ್ ಆಗಿದ್ದು, ಇದರ ವಿಶೇಷತೆ ಏನೆಂದರೆ ಮೇಲ್ಭಾಗಕ್ಕೆ ಚಿನ್ನವನ್ನು ಕರಗಿಸಿ ಸುರಿಯಲಾಗುತ್ತದೆ. ಆದ್ದರಿಂದ 1 ಕಪ್ ಬೇಳೆ ಸಾರಿನ ಬೆಲೆ 25 ಸಾವಿರ ರೂ. ಎಂದು ವರದಿ ತಿಳಿಸಿದೆ.