ನ್ಯೂಸ್ ನಾಟೌಟ್ :ಕಳೆದ 2023ರ ಸೆ.25ರಂದು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದ ಮೋಹನ್ ಕೊಠಾರಿಯವರು ಮಂಗಳೂರಿನ ಡಿ.ಸಿ.ಆರ್.ಇ ಗೆ ವರ್ಗಾವಣೆಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇವರಿಗೆ ಅಂದು ಸುಳ್ಯದಿಂದ ವರ್ಗಾವಣೆ ಆದೇಶವಾಗಿದ್ದ ನವೀನ್ ಚಂದ್ರ ಜೋಗಿ ಅವರು ಅಧಿಕಾರ ಹಸ್ತಾಂತರಿಸಿದ್ದರು. ಮಂಗಳೂರಿನವರಾದ ಮೋಹನ್ ಕೊಠಾರಿ ಅವರನ್ನು ಸುಳ್ಯ ವೃತ್ತ ನಿರೀಕ್ಷಕರಾಗಿ ನೇಮಕ ಮಾಡಿ ಸರಕಾರ ಆದೇಶ ಮಾಡಿತ್ತು.ಆದರೆ ಸದ್ಯ ಸುಳ್ಯಕ್ಕೆ ಯಾರನ್ನು ಇನ್ನೂ ನಿಯೋಜಿಸಿಲ್ಲ ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.