ನ್ಯೂಸ್ ನಾಟೌಟ್ : ಮಗುವೊಂದು ಆಟವಾಡುತ್ತಿದ್ದ ವೇಳೆ ಸಿಮೆಂಟ್ನಲ್ಲಿ ಮಾಡಲಾಗಿದ್ದ ಕಲಾಕೃತಿ ಜಿಂಕೆಯ ಮೇಲೆ ಮಗುವನ್ನ ಕೂರಿಸಿದ ಪರಿಣಾಮ ಕಲಾಕೃತಿ ಮುರಿದು ಬಿದ್ದು ಮಗು ದುರಂತ ಅಂತ್ಯ ಕಂಡ ಘಟನೆ ಬಗ್ಗೆ ಶಿವಮೊಗ್ಗದಿಂದ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಮುದ್ದಿನಕೊಪ್ಪದಲ್ಲಿ ಟ್ರೀ ಪಾರ್ಕ್ ಇದ್ದು, ನಿನ್ನೆ ಭಾನುವಾರವಾದ್ದರಿಂದ ಮಗುವನ್ನು ಕುಟುಂಬಸ್ಥರು ಅಲ್ಲಿಗೆ ಕರೆದೊಯ್ದಿದ್ದರು.ಈ ವೇಳೆ ಕಲಾಕೃತಿ ಮುರಿದುಬಿದ್ದಿದೆ. ಪರಿಣಾಮ ಕೆಳಕ್ಕೆ ಬಿದ್ದ ಮುಗುವಿಗೆ ಪೆಟ್ಟು ಬಿದ್ದಿದೆ. ತಕ್ಷಣವೆ ಮಗುವನ್ನ ಆಸ್ಪತ್ರೆಗೆ ಸಾಗಿಸಲಾಗಿಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಸದ್ಯ ಘಟನೆ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಗುವಿನ ಮೇಲೆಯೇ ಕಲಾಕೃತಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾಗಿ ಪೆಟ್ಟಾಗಿತ್ತು.ಗಾಂಧಿಬಜಾರ್ನ ನಿವಾಸಿಯೊಬ್ಬರ ಮಗುವಾದ ಸಮೀಕ್ಷಾ ಮೃತ ದುರ್ದೈವಿ. ಘಟನೆಯಲ್ಲಿ ಮಗುವಿಗೆ ಪೆಟ್ಟು ಬಿದ್ದಾಗಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮಗುವಿನ ತಾಯಿ ಹರಸಾಹಸ ಪಟ್ಟಿದ್ದು, ತಕ್ಷಣಕ್ಕೆ ನೆರವು ಸಹ ಸಿಗದೇ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.