ನ್ಯೂಸ್ ನಾಟೌಟ್ : ಗೊತ್ತಿಲ್ಲದ ಊರಿಗೆ ಹೋದಾಗ ನಾವು ಸ್ವಲ್ಪ ಹುಷಾರಾಗಿರಬೇಕಾಗುತ್ತದೆ. ಅದರಲ್ಲೂ ಗೂಗಲ್ ಮ್ಯಾಪ್ ಹಾಕಿ ಕೊಂಡು ಹೋದ್ರೆ ತಪ್ಪು ದಾರಿ ತೋರಿಸಿ ಯಡವಟ್ಟು ಆದ್ರೆ ಯಾರು ಗತಿ ಹೇಳಿ.. ಆದರೂ ಹೆಚ್ಚಿನವರು ಅದನ್ನೇ ಡಿಪೆಂಡ್ ಆದವರು ಇದ್ದಾರೆ.ಇದೇ ಸಾಲಿಗೆ ಈಗ ಮತ್ತೊಂದು ಅಂತಹದೇ ಘಟನೆ ಬೆಳಕಿಗೆ ಬಂದಿದೆ. ಕರ್ನಾಟಕದಿಂದ ಊಟಿಗೆ SUV ಕಾರಿನಲ್ಲಿ ಹೋಗಿದ್ದ ವ್ಯಕ್ತಿಯೊಬ್ಬರು ಗೂಗಲ್ನಲ್ಲಿ ರೂಟ್ ಮ್ಯಾಪ್ ಅನ್ನ ನೋಡಿಕೊಂಡು ಫಜೀತಿ ಅನುಭವಿಸಿದ ಘಟನೆಯೊಂದು ವರದಿಯಾಗಿದೆ.
ಇದೇ ವೀಕೆಂಡ್ನಲ್ಲಿ ವ್ಯಕ್ತಿಯೊಬ್ಬರು ತನ್ನ ಸ್ನೇಹಿತರ ಜೊತೆ ತಮಿಳುನಾಡಿನ ಊಟಿಗೆ ಹೋಗಿ ವಾಪಸ್ ಆಗುತ್ತಿದ್ದರು. ಬರುವ ದಾರಿ ಮಧ್ಯೆ ಗೂಗಲ್ ಮ್ಯಾಪ್ನಲ್ಲಿ ಫಾಸ್ಟೆಸ್ಟ್ ರೂಟ್ ಒಂದನ್ನ ಹುಡುಕಿದ್ದಾರೆ. ಆ ರೂಟ್ನಲ್ಲೇ ಕಾರು ಚಲಾಯಿಸಿಕೊಂಡ ಹೋದಾಗ ಯಡವಟ್ಟು ಆಗಿದೆ. ಗೂಗಲ್ ಮ್ಯಾಪ್ ಸೀದಾ ತಮಿಳುನಾಡಿನ ಗುಡಲೂರು ಗುಡ್ಡದ ಮೇಲೆ ಹೋಗಿ ಸ್ಟಾಪ್ ಆಗಿದೆ. ಮೊದಲೇ ನೀಲಗಿರಿ ಬೆಟ್ಟದ ಪ್ರದೇಶ ಆಗಿರೋದ್ರಿಂದ ಕಾರು ಚಾಲಕ ಗಾಬರಿಯಾಗಿದ್ದಾನೆ.
ಗುಡಲೂರಿನಿಂದ ಕರ್ನಾಟಕಕ್ಕೆ ಬರುವ ಮಾರ್ಗ ಮಧ್ಯೆ ಗೂಗಲ್ ಮ್ಯಾಪ್ ಕಾರು ಚಾಲಕನ ದಾರಿ ತಪ್ಪಿಸಿದೆ. ಬೆಟ್ಟದ ಮೇಲೆ ಹೋಗಿ ಕಾರು ನಿಲ್ಲುತ್ತಿದ್ದಂತೆ ಕಾರಿನಲ್ಲಿದ್ದವರು ಕೆಳಗೆ ಬರಲು ಸಾಧ್ಯವಾಗದೇ ಪರದಾಡಿದ್ದಾರೆ. ಕೊನೆಗೆ ಪೊಲೀಸರ ಸಹಾಯದಿಂದ ಮೆಟ್ಟಿಲಿನ ಮೇಲೆ ಕಾರನ್ನು ನಿಧಾನವಾಗಿ ಇಳಿಸಲು ಹರಸಾಹಸ ಪಟ್ಟಿದ್ದಾರೆ.ತಮಿಳುನಾಡಿನ ಗುಡಲೂರು ಮೂರು ರಾಜ್ಯದ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿಗೆ ರಜೆ ಸಮಯದಲ್ಲಿ ತಮಿಳುನಾಡು, ಕೇರಳ, ಕರ್ನಾಟಕದ ಹಲವಾರು ಟೂರಿಸ್ಟ್ಗಳು ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ SUV ಕಾರಿನಲ್ಲಿ ಬಂದಿದ್ದ ಸ್ನೇಹಿತರು ಗೂಗಲ್ ಮ್ಯಾಪ್ನಿಂದ ಬಹಳಷ್ಟು ಫಜೀತಿಗೆ ಸಿಲುಕಿದ್ದಾರೆ.ಅಂದೊಮ್ಮೆ ಮಳೆಗಾಲದ ಸಂದರ್ಭದಲ್ಲಿ ಗೂಗಲ್ ಮ್ಯಾಪ್ ಹಾಕಿ ಕಾರು ಚಲಾಯಿಸಿದ ಪರಿಣಾಮ ಅದು ನೇರವಾಗಿ ನೀರು ತುಂಬಿದ ನದಿ ಕಡೆಗೆ ತೆರಳಿ ಇಬ್ಬರು ವೈದ್ಯರು ದುರಂತ ಅಂತ್ಯವನ್ನೇ ಕಂಡಿದ್ದರು. ಹೀಗೆ ಅಪರಿಚಿತ ಸ್ಥಳಗಳಲ್ಲಿ ಗೂಗಲ್ ಮ್ಯಾಪ್ ಹಾಕುವುದಾದ್ರೆ ಎಚ್ಚರಿಕೆಯಿಂದಲೂ ಇರಬೇಕಾಗುತ್ತದೆ ಅನ್ನೋದಕ್ಕೆ ಇಂತಹ ಘಟನೆಗಳೇ ಸಾಕ್ಷಿ.