ನ್ಯೂಸ್ ನಾಟೌಟ್: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಊರಿನ ರಾಮಭಕ್ತರು ಒಟ್ಟಾಗಿ ಸೇರಿ ಹನುಮ ಧ್ವಜ ಹಾರಿಸಿದ್ದಾರೆ. ಆದರೆ ಮುಸ್ಲಿಂರ ಓಟಿಗಾಗಿ ರಾಜ್ಯ ಸರ್ಕಾರ ಧ್ವಜ ತೆಗೆದಿದೆ. ಈ ಘಟನೆಯನ್ನು ವಿಹೆಚ್ಪಿ, ಬಜರಂಗದಳ ಖಂಡಿಸುತ್ತೆ.
ಹನುಮ ಧ್ವಜ ಕೆಳಗಿಳಿಸಿದ ರೀತಿ ಮತ್ತೆ ಹನುಮ ಧ್ವಜ ಹಾರಿಸಬೇಕು. ಇಲ್ಲದಿದ್ದರೆ ಇಡೀ ರಾಮಭಕ್ತರಿಗೆ ಕರೆ ನೀಡುತ್ತೇವೆ. ರಾಜ್ಯದಲ್ಲಿ ಹನುಮ ಧ್ವಜ ಅಭಿಯಾನ ಮಾಡುತ್ತೇವೆ. ರಸ್ತೆ, ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ (VHP) ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿ, ನಾವು ಈ ಮೂಲಕ ಹನುಮ ಭಕ್ತಿಯನ್ನು ಸರ್ಕಾರಕ್ಕೆ ತೋರಿಸುತ್ತೇವೆ. ಹಿಂದೂ ಸಮಾಜಕ್ಕೆ, ರಾಮ-ಹನುಮ ಭಕ್ತರ ಮನಸ್ಸಿಗೆ ನೋವಾಗಿದೆ. ರಾಷ್ಟ್ರ ಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ಹಾರಿಸಲು ಅದರದ್ದೇ ಆದ ನೀತಿ ನಿಯಮಗಳಿವೆ. ರಾಷ್ಟ್ರ ಧ್ವಜಕ್ಕೂ ಅವಮಾನ ಮಾಡಿದ್ದಾರೆ. ಈ ರೀತಿ ಮಾಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಪ್ರಕರಣ ಸಂಬಂಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ಈ ಕಾಂಗ್ರೆಸ್ ನವರಿಗೆ ಕೇಸರಿ ಕಂಡ್ರೆ ಆಗಲ್ಲ. ಹಿಂದೂ, ಹಿಂದುತ್ವ ಕಂಡ್ರೆ ಆಗಲ್ಲ. ಇಡೀ ದೇಶದಲ್ಲಿ ಶ್ರೀ ರಾಮನ ಅಲೆಯಲ್ಲ, ಸುನಾಮಿಯೇ ಎದ್ದಿದೆ. ಮನೆ ಮನೆ, ಹಳ್ಳಿ ಹಳ್ಳಿಗಳಲ್ಲಿ ಆ ವೈಭವ ನೋಡಲಾಗದೇ ಹೊಟ್ಟೆ ಉರಿತಾಯಿದೆ ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಸರಿ ಯಾವುದೋ ವ್ಯಕ್ತಿ, ಧರ್ಮ ಪಕ್ಷದ್ದೋ ಅಲ್ಲ, ಸಾವಿರಾರು ವರ್ಷದಿಂದ ಬಂದ ಕೇಸರಿ ಪತಾಕೆ ನಿಮಗೇನು ತೊಂದರೆ ಕೊಡುತ್ತಿದೆ. ಮುಸ್ಲಿಂ ವ್ಯಕ್ತಿಗಳು ಅಡ್ಡಪಡಿಸಿದರೇ, ಅವರಿಗೆ ಹೇಳಿ. ಇದು ಪಾಕಿಸ್ತಾನ ಅಲ್ಲ, ಅಫ್ಘಾನಿಸ್ತಾನ ಅಲ್ಲ, ಭಾರತ ಎಂದು. ಹಿಂದೂಸ್ತಾನ್ದಲ್ಲಿ ಕೇಸರಿ ಧ್ವಜವೇ ಹಾರಾಡುತ್ತೆ. ಇದನ್ನ ಅವರಿಗೆ ಹೇಳೋದು ಬಿಟ್ಟು, ಇವತ್ತು ಕೇಸರಿ ಧ್ವಜ ಇಳಿಸುವ ಕಾಂಗ್ರೆಸ್ನವರು ಧರ್ಮ ದ್ರೋಹಿಗಳು ಎಂದರು.