ಕರಾವಳಿ

ವೇಣೂರಿನಲ್ಲಿ ಭೀಕರ ಪಟಾಕಿ ಸ್ಫೋಟ ಪ್ರಕರಣ,ಮಗ ಇಲ್ಲಿಗೆ ಬಂದು ಕೇವಲ 11 ದಿನಗಳಷ್ಟೇ ಆಯ್ತು-ಮೃತ ಚೇತನ್ ತಂದೆ ಭಾವುಕ ನುಡಿ

ನ್ಯೂಸ್‌ ನಾಟೌಟ್‌ : ವೇಣೂರಿನಲ್ಲಿ ಪಟಾಕಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿ ಸ್ಫೋಟದಲ್ಲಿ ಸಾವನ್ನಪ್ಪಿದ ಹಾಸನ‌ ಮೂಲದ 24 ವರ್ಷದ ಚೇತನ್ ಪೋಷಕರು ಇದೀಗ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಕಣ್ಣೀರಾದ ಅವರು ಮಗನ ಸಾವನ್ನು ನೆನೆದು ದುಖಃ ತಪ್ತರಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು “ಸಾವನ್ನಪ್ಪಿದ ಸುದ್ದಿಯನ್ನು ಟಿವಿಯಲ್ಲಿ ನೋಡಿ ಗೊತ್ತಾಯಿತು. ಮಗ 5 ವರ್ಷದಿಂದ ಪಟಾಕಿ ತಯಾರಿಕಾ ಕೆಲಸ ಮಾಡುತ್ತಿದ್ದ.ಹಾಸನದಲ್ಲೇ ಪಟಾಕಿ ಕೆಲಸ ಮಾಡಿಕೊಂಡಿದ್ದ ಎಂದು ಹೇಳಿದರು.

ಇಲ್ಲಿಗೆ ಬಂದು ಕೇವಲ ೧೧ ದಿನಗಳಷ್ಟೇ ಆಗಿತ್ತು. ಅಷ್ಟೊತ್ತಿಗಾಗಲೇ ಈ ದುರಂತ ಸಂಭವಿಸಿದೆ.ನಿನ್ನೆ ಬೆಳಗ್ಗೆ 10 ಗಂಟೆಗೆ ಕಾಲ್ ಮಾಡಿದ್ದೆವು.ನಮ್ಮ ಮನೆಯವರಿಗೆ ಸಾವಿನ ವಿಷಯ ಯಾರಿಗೂ ಗೊತ್ತಿಲ್ಲ.ಮಗ ಕೆಲಸ ಮಾಡಿ ತಿಂಗಳಿಗೆ ಮೂರು ಸಾವಿರ ನೀಡುತ್ತಿದ್ದ.ಪೊಲೀಸರು ನಮ್ಮ DNA ಟೆಸ್ಟ್ ಆಗಬೇಕು ಅಂತ ಹೇಳಿದ್ದಾರೆ ಎಂದು ಸಾವನ್ನಪ್ಪಿದ ಚೇತನ್ ತಂದೆ ಉಮೇಶ್ ಹೇಳಿದ್ದಾರೆ.

Related posts

ಸಕಲ ಸರಕಾರಿ ಗೌರವಗಳೊಂದಿಗೆ ನವಿಲಿನ ಅಂತ್ಯಸಂಸ್ಕಾರ

ಕರಾವಳಿ: 30-40 ಕಿ.ಮೀ ವೇಗದ ಗಾಳಿ ಜೊತೆಗೆ ಮಳೆ ಸಾಧ್ಯತೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಮಠಾಧಿಪತಿಗಳ ಕೈಗೆ ಆಯುಧ ಕೊಡಬೇಕು ಎಂದದ್ದೇಕೆ ಸ್ವಾಮೀಜಿ..? ಲಿಂಗಾಯುತ ಸ್ವಾಮೀಜಿ ಎಚ್ಚರಿಕೆ ನೀಡಿದ್ಯಾರಿಗೆ?