ನ್ಯೂಸ್ ನಾಟೌಟ್ : ಹನುಮಧ್ವಜ ಕೆಳಗಿಳಿಸಿದ ಪೊಲೀಸರ ವಿರುದ್ಧ ಮಂಡ್ಯದಲ್ಲಿ ಜನರು ಸಿಡೆದೆದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ರಾಷ್ಟ್ರ ಧ್ಬಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.
ಮಂಡ್ಯದ (Mandya) ಕೆರಗೋಡು ಗ್ರಾಮಮದಲ್ಲಿ ಪೊಲೀಸರು (Mandya Police) ಹನುಮಧ್ವಜ ಇಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ರಾಷ್ಟ್ರ ಧ್ಬಜ ಹಾಗೂ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಆದ್ರೆ ರಾಷ್ಟ್ರ ಧ್ಬಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್, “ಸಿದ್ದರಾಮಯ್ಯ `ಜೈ ಶ್ರೀರಾಮ್’ ಅಂದರು, ಡಿಕೆ ಶಿವಕುಮಾರ್ ಶಿವ ಅಂದರು. ಕುಕ್ಕರ್ ಬಾಂ* ಬ್ ಹಿಡಿದುಬಂದನಿಗೆ ಬ್ರದರ್ ಅಂದರು, ಅವರ ಹೃದಯದಲ್ಲಿ ಟಿಪ್ಪು ತುಂಬಿದ್ದಾನೆ. ಹನುಮಧ್ವಜ ಕೆಳಗಿಳಿಸಲು ನೇರವಾಗಿ ಕಾಂಗ್ರೆಸ್ ಕಾರಣ. ಇದು ಹಿಂದೂ ವಿರೋಧಿ ಹಾಗೂ ರಾಮ ವಿರೋಧಿ ನೀತಿ. ಏಕಾಏಕಿ ಪೋಲಿಸರನ್ನ ಕರೆದುಕೊಂಡು ಹೋಗಿ ಧ್ವಜ ತೆಗೆಸುವಂತಹದ್ದು ಏನಿತ್ತು?” ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರೇ ನಿಮ್ಮ ಹೆಸರಲ್ಲಿ ರಾಮ ಇದ್ರೆ ಆಗಲ್ಲ, ಮನಸ್ಸಿಲ್ಲಿ ಇರೋದು ಟಿಪ್ಪು. ಹನುಮ ಧ್ವಜ ಕಿತ್ತುಹಾಕಿರುವುದು ಹಿಂದೂಗಳಿಗೆ ಮಾಡಿರುವ ಅವಮಾನ. ಗ್ರಾಮ ಪಂಚಾಯಿತಿಯಲ್ಲೇ ತೀರ್ಮಾನ ಮಾಡಿದ ಬಳಿಕ ಹನುಮಧ್ವಜ ಹಾಕಲಾಗಿತಗ್ತು. ಆದ್ರೆ ಕಾಂಗ್ರೆಸ್ಗೆ ಹನುಮನ ಬಗ್ಗೆ ದ್ವೇಷದಿಂದ ಈ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.