ನ್ಯೂಸ್ ನಾಟೌಟ್ : ನನ್ನ ಹಾಗೂ ದರ್ಶನ್ ಅವರ ಪರಿಚಯಕ್ಕೆ ಹತ್ತು ವರ್ಷ ಎಂದು ಬರೆದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಕೆಂಗಣ್ಣಿಗೆ ಗುರಿಯಾದ ಪವಿತ್ರಾ ಗೌಡ ಯಾರು?ಆಕೆಯ ಹಿನ್ನಲೆ ಏನು ಅನ್ನೋದರ ಡಿಟೇಲ್ಸ್ ಇದೆ ನೋಡಿ..
ನಟಿ ಪವಿತ್ರ ಗೌಡ ಕನ್ನಡ ಸಿನಿರಂಗದ ನಟಿ. ಇವರಿಗೆ ಖುಷಿ ಗೌಡ ಎಂಬ ಮಗಳಿದ್ದಾಳೆ. ಪವಿತ್ರ ಗೌಡ 18ರ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು ಎಂದು ಹೇಳಲಾಗುತ್ತಿದೆ.ಪವಿತ್ರಾ ಗೌಡ ಹಾಗೂ ಸಂಜಯ್ ಲವ್ ಮ್ಯಾರೇಜ್ ಆಗಿದ್ದರಂತೆ. ಚಾಮರಾಜಪೇಟೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಸಂಜಯ್ ಸಿಂಗ್ ಅವರು ದಿನಸಿ ಅಂಗಡಿ ನಡೆಸುತ್ತಿದ್ದರಂತೆ. ಪವಿತ್ರಾ ಗೌಡ ಅವರೇ ಹೇಳಿಕೊಂಡಂತೆ ಖುಷಿ ಗೌಡ ಇವರಿಬ್ಬರ ಮಗಳು.
ದಾಂಪತ್ಯ ಜೀವನದಲ್ಲಿ ವಿರಸ ಮೂಡಿದ ಕಾರಣ ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ವಿಚ್ಛೇದನ ಪಡೆದರು ಎನ್ನಲಾಗಿದೆ. ಡಿವೋರ್ಸ್ ನಂತರ ಪುತ್ರಿ ಜೊತೆ ಪವಿತ್ರಾ ವಾಸವಾಗಿದ್ದಾರೆ. ಇದೀಗ ದರ್ಶನ್ ಅವರ ಜೊತೆ ಪವಿತ್ರಾ ಗೌಡ ಹತ್ತು ವರ್ಷಗಳಿಂದ ಸಂಬಂಧದಲ್ಲಿದ್ದೇನೆ ಎಂದು ಪೋಸ್ಟ್ ಹಾಕಿದ್ದು, ಇದು ವಿಜಯಲಕ್ಷ್ಮಿ ದರ್ಶನ್ ಅವರ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಇದೀಗ ಚರ್ಚೆ ಜೋರಾಗಿದೆ.