ನ್ಯೂಸ್ ನಾಟೌಟ್ : ಇಂದು ದೇಶದೆಲ್ಲೆಡೆ 75ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ.ಈ ಹಿನ್ನಲೆಯಲ್ಲಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ನಡೆಯಿತು.ಈ ವೇಳೆ ಆಕರ್ಷಕ ಪಥ ಸಂಚಲನ ನಡೆಯಿತು.ಸುಳ್ಯದ ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಇದರ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡರು. ಪ್ರಾಕೃತಿಕ ವಿಕೋಪದಡಿ ಸೇವೆ ಸಲ್ಲಿಸಿದ ಮುಳುಗುತಜ್ಞರನ್ನು ಗೌರವಿಸಲಾಯಿತು.ಉತ್ತಮ ಕಾರ್ಯನಿರ್ವಹಿಸಿದ 16 ಮಂದಿ ಸರಕಾರಿ ನೌಕರರಿಗೆ ಗೌರವ ಸಲ್ಲಿಸಲಾಯಿತು.ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿದ ಸಾಧಕ ವಿದ್ಯಾರ್ಥಿಗಳನ್ನು ಕೂಡ ಈ ಸಂದರ್ಭದಲ್ಲಿ ಗುರುತಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ಧ್ವಜಾರೋಹಣಗೈದರು. ಪಥ ಸಂಚಲನ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು “ನಮ್ಮ ದೇಶದ ಭಾಷೆ, ಜನ ಮನವನ್ನು ಎಲ್ಲರೂ ಗೌರವಿಸೋಣ. ದೇಶದ ಮೂಲಭೂತ ಸಂಪನ್ಮೂಲಗಳನ್ನು ಎಲ್ಲರೂ ಉಳಿಸಿ ಬೆಳೆಸಲು ಬದ್ಧರಾಗೋಣ” ಎಂದು ಹೇಳಿದರು.
ಈ ಸಂದರ್ಭ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ವಿನಯ ಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಸರ್ಕಲ್ ಇನ್ ಸ್ಪೆಕ್ಟರ್ ಮೋಹನ್ ಕೊಠಾರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಸುಳ್ಯ ನ.ಪಂ. ಮುಖ್ಯಾಧಿಕಾರಿ ಎಂ.ಹೆಚ್. ಸುಧಾಕರ, ನ.ಪಂ. ಸದಸ್ಯರುಗಳಾದ ಸುಧಾಕರ ಕುರುಂಜಿಭಾಗ್, ಕಿಶೋರಿ ಶೇಟ್, ಶೀಲಾ ಕುರುಂಜಿ, ಡೇವಿಡ್ ಧೀರಾ ಕ್ರಾಸ್ತ, ಶಿಲ್ಪಾ ಸುದೇವ್, ಸುಶೀಲ ಕಲ್ಲುಮುಟ್ಲು, ಶಶಿಕಲಾ ನೀರಬಿದಿರೆ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರಕಾರಿ ನೌಕರರಿಗೆ ಸನ್ಮಾನ : ಈ ಸಂದರ್ಭ ೧೬ ಮಂದಿ ಸರಕಾರಿ ನೌಕರರನ್ನು ಸನ್ಮಾನಿಸಲಾಯಿತು.ಸುಳ್ಯ ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿರುವುದನ್ನು ಗುರುತಿಸಿ ಈ ಗೌರವ ನೀಡಲಾಯಿತು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ತೀರ್ಥರಾಮ ಹೆಚ್.ಬಿ.,ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಶ್ರೀಮತಿ ಹಿಮಲೇಶ್ವರಿ ಎ.ಎ., ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಇಂಜಿನಿಯರ್ ಮಣಿಕಂಠ, ಕೆಪಿಎಸ್ ಗಾಂಧಿನಗರ ಸುಳ್ಯದ ಪ್ರಾಂಶುಪಾಲ ಅಬ್ದುಲ್ ಸಮದ್ ಎನ್, ತಾಲೂಕು ಪಂಚಾಯತ್ ನಿಂದ ಮ್ಯಾನೇಜರ್ ಹರೀಶ್ ಕೆ,ಸುಳ್ಯ ಉಪಖಾಜನೆಯ ಮುಖ್ಯ ಲೆಕ್ಕಿಗ ಪ್ರಕಾಶ್ ವಿ, ಸರ್ವೆ ಇಲಾಖೆಯ ತಾಲೂಕು ಸರ್ವೆಯರ್ ಜಗದೀಶ್ ಬಿ, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್., ಕಂದಾಯ ಇಲಾಖೆಯಿಂದ ಸುಳ್ಯ ವಿ.ಎ. ತಿಪ್ಪೇಶಪ್ಪ ಹೆಚ್.ಟಿ., ದೇವಚಳ್ಳ ವಿ.ಎ. ಮಧು ಕೆ.ಬಿ.,ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯಿಂದ ಡಾ.ನಿತೀನ್ ಪ್ರಭು,ಕೃಷಿ ಇಲಾಖೆಯಿಂದ ಗೀತಾ ಕುಮಾರಿ .ಎಸ್., ಬಿಸಿಎಂ ಇಲಾಖೆಯಿಂದ ಅಡುಗೆ ಸಿಬ್ಬಂದಿ ನಾರಾಯಣ ಗೌಡ, ಸಮಾಜ ಕಲ್ಯಾಣ ಇಲಾಖೆಯಿಂದ ವಾರ್ಡನ್ ಬಾಲಕೃಷ್ಣ ಗೌಡ ರನ್ನು ಸನ್ಮಾನಿಸಿ ಗೌರವಿಸಲಾಯಿತು.ಇತ್ತ ಕ್ಷೇತ್ರ ಸಂಪನ್ಮೂಲ ಕೇಂದ್ರದಿಂದ ಸುಬ್ರಹ್ಮಣ್ಯ ಕೆ.ಎನ್., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರೂ ಕಾರಣಾಂತರಗಳಿಂದ ಸಭೆಗೆ ಹಾಜರಾಗಲು ಅಸಾಧ್ಯವಾಗಿತ್ತು.
ಇನ್ನು ಜೀವದ ಹಂಗು ತೊರೆದು ತುರ್ತು ಪರಿಸ್ಥಿಯಲ್ಲಿ ನೆರವಿಗೆ ಧಾವಿಸುವ ಹಾಗೂ ಪ್ರಾಕೃತಿಕ ವಿಕೋಪದಡಿ ಸೇವೆ ಸಲ್ಲಿಸಿದ ಮುಳುಗುತಜ್ಞರನ್ನು ಈ ಸಂದರ್ಭ ಗೌರವಿಸಲಾಯಿತು. ಹೋಂ ಗಾರ್ಡ್ ಪ್ರಭಾಕರ ಪೈ, ತಾಜುದ್ದೀನ್ ಟರ್ಲಿ ಕಲ್ಲುಗುಂಡಿ, ಶರೀಫ್ ಟಿ.ಎ., ತಾಜುದ್ದೀನ್ ಅರಂತೋಡು, ಅಬ್ಬಾಸ್ ಶಾಂತಿನಗರ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಮುನೀರ್ ಅರಂತೋಡು, ಮುಝಂಬಿಲ್ ಕುಕ್ಕುಂಬಳ, ಸಿಯಾಬ್ ಬೆಟ್ಟಂಪಾಡಿ, ಆರ್.ಬಿ.ಬಶೀರ್, ಸವಾದ್ ಪೈಚಾರ್, ಉಲ್ಲಾಸ್ ಕುದ್ಕುಳಿ, ನೂರುದ್ದೀನ್ ಪೈಚಾರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಷ್ಟಮಟ್ಟದ ಸಾಧನೆಗೆ ಗೌರವ: ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಾ ಸಿ.ಹೆಚ್., ಜೀವಿಕಾ, ಸಾನ್ವಿ, ನಿಶಾ ಪಿ.ಎಸ್., ವೈಷ್ಣವಿ ಪ್ರಕಾಶ್, ನಿಧಿ ಎ.ಎಸ್., ಸೃಜನಾದಿತ್ಯಶೀಲ, ಅಭಿಜ್ಞಾ ಎನ್., ಅನನ್ಯ ಕೆ.ಎಂ., ಸಾಕ್ಷಿ ಪಿ.ಎ., ಗಹನ ಎಸ್, ಮಾರ್ಗದರ್ಶಿ ಶಿಕ್ಷಕರಾದ ಪ್ರಕಾಶ್ ಮೂಡಿತ್ತಾಯ, ಮಮತಾ ಎಂ.ಜೆ, ಲತಾ ಪೈ, ನಾಗರಾಜ್ ಇವರನ್ನು ಎಲ್ಲರ ಸಮ್ಮುಖದಲ್ಲಿ ಗೌರವಿಸಿ ಪ್ರೋತ್ಸಾಹಿಸಲಾಯಿತು.
ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ. ರಮೇಶ್ ಸ್ವಾಗತಿಸಿದರು. ಮಹಾದೇವಸ್ವಾಮಿ ಹಾಗೂ ಶಿವಪ್ರಸಾದ್ ಕಡವೆಪಳ್ಳ ಸನ್ಮಾನಿತರ ಪರಿಚಯ ಭಾಷಣ ಮಾಡಿದರು.