ನ್ಯೂಸ್ ನಾಟೌಟ್ : ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿ ವಿಶ್ವನಾಥ ಮಂದಿರ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿ (Gyanvapi Mosque) ಬಗ್ಗೆ ವೈಜ್ಞಾನಿಕ ಸಮೀಕ್ಷಾ ವರದಿ ಇದೀಗ ಬಹಿರಂಗಗೊಂಡಿದೆ.
ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ ಇತ್ತು ಅಂತ ಪುರಾತತ್ವ ಸರ್ವೇಕ್ಷಣಾ ವರದಿ (archaeological survey report,) ಹೇಳಿದೆ ಎನ್ನಲಾಗಿದೆ.
ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಪುರಾತತ್ವ ಸರ್ವೇಕ್ಷಣಾ ವರದಿಯನ್ನು ಓದಿದ್ದು, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೈನ್, “ಎಎಸ್ಐ ಸಮೀಕ್ಷೆಯು ಪ್ರಸ್ತುತ ರಚನೆಗಿಂತ ಹಿಂದಿನ ದೊಡ್ಡ ಹಿಂದೂ ದೇವಾಲಯದ ರಚನೆಯನ್ನು ಎತ್ತಿ ತೋರಿಸಿದೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಈ ಶಾಸನಗಳಲ್ಲಿ ಕಂಡುಬರುತ್ತವೆ ಎನ್ನುವುದು ವರದಿಯಲ್ಲಿ ಸ್ಪಷ್ಟಗೊಂಡಿದೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯದ್ದಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಇವುಗಳು ವಾಸ್ತವವಾಗಿ ಶಾಸನಗಳಾಗಿವೆ. ಹಿಂದಿನ ಹಿಂದೂ ದೇವಾಲಯದ ಕಲ್ಲು, ನಿರ್ಮಾಣ, ಅಸ್ತಿತ್ವದಲ್ಲಿರುವ ರಚನೆಯ ದುರಸ್ತಿ ಸಮಯದಲ್ಲಿ ಮರುಬಳಕೆ ಮಾಡಲಾಗಿದೆ. ಅವು ದೇವನಾಗರಿ, ತೆಲುಗು ಮತ್ತು ಕನ್ನಡ ಲಿಪಿಗಳಲ್ಲಿನ ಶಾಸನಗಳನ್ನು ಒಳಗೊಂಡಿವೆ ಎಂದು ವರದಿ ತಿಳಿಸಿದೆ.
ಹಿಂದಿನ ಶಾಸನಗಳ ಮರುಬಳಕೆಯು ಹಿಂದಿನ ರಚನೆಗಳನ್ನು ನಾಶಪಡಿಸಿದೆ ಎಂದು ಸೂಚಿಸುತ್ತದೆ. ಅವುಗಳ ಭಾಗಗಳನ್ನು ಅಸ್ತಿತ್ವದಲ್ಲಿರುವ ರಚನೆಯ ನಿರ್ಮಾಣ ದುರಸ್ತಿಯಲ್ಲಿ ಮರುಬಳಕೆ ಮಾಡಲಾಯಿತು. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಈ ಶಾಸನಗಳಲ್ಲಿ ಕಂಡುಬರುತ್ತವೆ ಅಂತ ವಕೀಲರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜುಲೈ 21 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಸೂಚಿಸಿತ್ತು, ಅದರಲ್ಲಿ ಉತ್ಖನನ ನಡೆಸಲು ಅನುಮತಿಯನ್ನು ಸಹ ನೀಡಲಾಯಿತು. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ದೇವಸ್ಥಾನದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಈ ಸಮೀಕ್ಷೆಯನ್ನು ನಡೆಸಲಾಗಿದೆ.
ಜ್ಞಾನವ್ಯಾಪಿ ಮಸೀದಿಯು ಉತ್ತರ ಪ್ರದೇಶದ ಬನಾರಸ್ನಲ್ಲಿದೆ . ಇದನ್ನು 1669ರಲ್ಲಿ ಮೊಘಲ ದೊರೆ ಔರಂಗಜೇಬ ಕೆಡವಿದ ಹಳೆಯ ಶಿವ ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಈ ಸ್ಥಳವು ಮೂಲತಃ ವಿಶ್ವೇಶ್ವರ ದೇವಸ್ಥಾನವನ್ನು ದಿದ್ದು, ಜೊತೆಯಲ್ಲಿ ಬಸಾರಸ್ನ ಅತ್ಯಂತ ಪ್ರಸಿದ್ಧ ಬ್ರಾಹ್ಮಣ ಕುಟುಂಬದ ನಾರಾಯಣ ಭಟ್ಟರು ಸ್ಶಾಪಿಸಿದರು ಎನ್ನಲಾಗಿದೆ. ಜ್ಞಾನವಾಪಿ ಮಸೀದಿಯನ್ನು ಬನಾರಸ್ನ ವಿಶ್ವೇಶ್ವರ ದೇವಸ್ಥಾನ ಎಂದು ಜೇಮ್ಸ್ ಪ್ರಿನ್ಸೆಸ್ ಎನ್ನುವವರು ಚಿತ್ರಿಸಿದ್ದಾರೆ. ಈಗ ಕೆಡವಲಾದ ದೇವಾಲಯದ ಮೂಲ ಗೋಡೆ ಇಂದಿಗೂ ಮಸೀದಿಯಲ್ಲಿದೆ.