ನ್ಯೂಸ್ ನಾಟೌಟ್ : ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಾಯೋಜಕತ್ವದಲ್ಲಿ ಕೆವಿಜಿ ಕಾನೂನು ಮಹಾ ವಿದ್ಯಾಲಯದ ಅಡಿಟೋರಿಯಮ್ ಹಾಲ್ ನಲ್ಲಿ ಇಂದು “ಉತ್ತಮ ಹಾಗೂ ಯಶಸ್ವಿ ವಕೀಲನಾಗುವುದು ಹೇಗೆ ? “ಎನ್ನುವ ವಿಚಾರದಡಿಯಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷ ಡಾ|ಕೆ.ವಿ.ಚಿದಾನಂದ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯಮೂರ್ತಿ ಶ್ರೀ ಎಂ. ಕರ್ಪಗ ವಿನಯಗಂ ಅವರು ಭಾಗವಹಿಸಿದ್ದರು.ಈ ವೇಳೆ ಅದ್ಭುತ ಭಾಷಣ ಮಾಡಿ ಯಶಸ್ಸಿನ ಗುಟ್ಟನ್ನು ತೆರೆದಿಟ್ಟರು.ಯಶಸ್ಸಿಗೆ ಸುಗಮ ಮಾರ್ಗವೆಂದರೆ ಶಿಸ್ತು. ಶಿಸ್ತಿನ ವಿದ್ಯಾರ್ಥಿಯು ಎಲ್ಲಿ ಹೋದರೂ ಯಶಸ್ಸಿನ ಫಲವನ್ನು ಕಾಣಬಹುದು.ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಮಾನವೀಯತೆಯ ನಿಲುವು ವೃತ್ತಿಜೀವನದ ಯಶಸ್ಸಿನ ಗುಟ್ಟುಗಳು ಎಂದು ಹೇಳಿದರು. ಈ ಸಂದರ್ಭ ಅವರ ವೃತ್ತಿಜೀವನದ ಅವಧಿಯಲ್ಲಿ ಅವರು ಎದುರಿಸಿದ ಕೆಲ ಗಂಭೀರ ನೈಜ ಘಟನೆಗಳ ಬಗ್ಗೆ ವಿವರಿದರು.
ಈ ವೇಳೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. , ಸುಪ್ರೀಂ ಕೋರ್ಟ್ ನ್ಯಾಯಧೀಶ ಕೆ.ವಿ.ಮುತ್ತು ಕುಮಾರ್,ಮಂಗಳೂರಿನ ನ್ಯಾಯಧೀಶರಾದ ವಿನಾಯಕ್ ಕಾಮತ್ ಕೆ. , ಪ್ರಶಾಂತ ಕೆ. ಹಾಗೂ ವರಲಕ್ಷ್ಮೀ ಶೇಟ್ ವೇದಿಕೆಯಲ್ಲಿದ್ದರು.ವಿದ್ಯಾರ್ಥಿ ಕಲ್ಯಾಣಾಧಿಕಾರಿ ಟೀನಾ ಹೆಚ್.ಎಸ್. ಹಾಗೂ ಕಾಲೇಜ್ ಪ್ರಾಂಶುಪಾಲ ಉದಯ ಕೃಷ್ಣ ಬಿ.,ನಯನಾ ಪಿ.ಯು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.