ನ್ಯೂಸ್ ನಾಟೌಟ್ :ಸುಳ್ಯದ ಜನರ ಕನಸಿನ ವಸ್ತ್ರಗಳ ಮಾಯಾ ಲೋಕ ಕುಮ್ ಕುಮ್ ಫ್ಯಾಷನ್ ವಸ್ತ್ರ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.ದಶಕಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ಮಳಿಗೆಯಲ್ಲಿ ಅತ್ಯಾಕರ್ಷಕ ವರ್ಣ ವಸ್ತ್ರಗಳ ಸಂಗ್ರಹವಿದ್ದು,ವಿಶೇಷ ಆಫರ್ ಗಳೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಅಂತೆಯೇ ದೀಪಾವಳಿ, ಹೊಸ ವರುಷ, ಸುಳ್ಯ ಜಾತ್ರೋತ್ಸವ ಸಹಿತ ಹಬ್ಬಗಳ ಸಂಭ್ರಮಕ್ಕಾಗಿ 151 ದಿನಗಳ ‘ಬಿಗ್ ಸೇಲ್’ ಆಯೋಜಿಸಲಾಗಿತ್ತು.ಈ ಪ್ರಯುಕ್ತ ಗ್ರಾಹಕರಿಗಾಗಿ ಹಲವು ಬಹುಮಾನಗಳ ನೀಡಲಾಗಿದ್ದು, ಇದೀಗ ಬಂಪರ್ ಬಹುಮಾನವಾದ ಸ್ಕೂಟಿಯನ್ನು ಶಿವಲಿಂಗ ಹಾಗೂ ದೀಪಾ ಎಂಬವರು ಗೆದ್ದುಕೊಂಡರು.ಇವರಿಗೆ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿ ವರ್ಗ ಹಸ್ತಾಂತರ ಮಾಡಿದರು.
ಸುಳ್ಯದಲ್ಲಿ ತನ್ನದೇ ಆದ ಶೈಲಿಯಲ್ಲಿ ವಿಶೇಷ ರೀತಿಯಲ್ಲಿ ಹಲವು ವರ್ಷಗಳಿಂದ ಗ್ರಾಹಕರ ಮನಸ್ಸನ್ನು ಸೆಳೆದಿರುವ ಕುಂ..ಕುಂ..ಫ್ಯಾಶನ್ ಹೊಸ ಹೊಸ ಬಟ್ಟೆಗಳ ಹೊಸ ವಿನ್ಯಾಸಗಳೊಂದಿಗೆ ಗ್ರಾಹಕರಿಗೆ ಹತ್ತಿರವಾಗುತ್ತಿದೆ.ಇಲ್ಲಿ ಪ್ರತೀ ವರ್ಷ ಗ್ರಾಹಕರಿಗೆ ವಿಶೇಷ ಬಹುಮಾನದೊಂದಿಗೆ ಪ್ರತೀ ಖರೀದಿಗೂ ಗಿಫ್ಟ್ ನೀಡಲಾಗುತ್ತದೆ.ಮದುವೆ,ಸಮಾರಂಭ, ಗೃಹಪ್ರವೇಶ, ಪೂಜೆ,ಹೀಗೆ ಯಾವುದೇ ಕಾರ್ಯಕ್ರಮವಿದ್ದರೂ ವಿಶೇಷ ರಿಯಾಯಿತಿ ದರದಲ್ಲಿ ಬಟ್ಟೆಗಳು ಇಲ್ಲಿ ಲಭ್ಯವಿದೆ.