ನ್ಯೂಸ್ ನಾಟೌಟ್ : ಈಗ ಎತ್ತ ಹೋದ್ರು ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೆಸರೇ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಅವರ ಮಾಜಿ ಪತಿ ಶೋಯೆಬ್ ಮಲ್ಲಿಕ್ ಅವರು ಮೂರನೇ ವಿವಾಹವಾಗಿರೋದು. ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಚೇದನ ಪಡೆದಿದ್ದಾರೆ. ಈ ಬೆನ್ನಲ್ಲೇ ಮಾಜಿ ಪತಿಯಿಂದ ಜೀವನಾಂಶ ಪಡೆದು ಬದುಕುವ ಅಗತ್ಯ ಇಲ್ಲ ಎಂದು ಸಾನಿಯಾ ಜೀವನಾಶ ಬೇಡಾ ಎಂದು ಹೇಳಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಸದ್ಯ ಇದೀಗ ಸಾನಿಯಾ ಮಿರ್ಜಾ ಒಟ್ಟು ಆಸ್ತಿ ಮೌಲ್ಯದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.
ಆಟಗಾರ್ತಿಯಾಗಿ ಆರಂಭವಾದ ಸಾನಿಯಾ ಮಿರ್ಜಾ ಪಯಣ ಅಂತಾರಾಷ್ಟ್ರೀಯ ಮಟ್ಟ ತಲುಪಿತು.ಅನೇಕ ಪ್ರಶಸ್ತಿಗಳನ್ನು ಗೆದ್ದ ಇವರು ಶೋಯೆಬ್ ಮಲಿಕ್ ಅವರನ್ನು ವರಿಸಿದ್ದರು.ಸಾನಿಯಾ ಪ್ರಸ್ತುತ ತನ್ನ ಮಗ ಇಜಾನ್ ಜೊತೆ ದುಬೈನಲ್ಲಿ ನೆಲೆಸಿದ್ದಾರೆ. ಸಾನಿಯಾ ಮಿರ್ಜಾ ಅವರ ಐಷಾರಾಮಿ ಜೀವನಶೈಲಿ, ಅವರ ಕಾರು ಸಂಗ್ರಹ ಮತ್ತಿತರ ವಿಷಯಗಳ ಕುರಿತು ಶೋಧ ನಡೆಸಲಾಗುತ್ತಿದೆ.
ವರದಿಗಳ ಪ್ರಕಾರ, ಸಾನಿಯಾ ಮಿರ್ಜಾ ಅವರ ನಿವ್ವಳ ಮೌಲ್ಯ ಸುಮಾರು ರೂ. 210 ಕೋಟಿ. ಅವರು ಬ್ರ್ಯಾಂಡ್ ಎಂಡಾರ್ಸ್ಮೆಂಟ್ಗಳು ಮತ್ತು ಇತರ ಹೂಡಿಕೆಗಳ ಮೂಲಕ ಗಳಿಸುತ್ತಿದ್ದಾರೆ. ಅವರ ಬಳಿ ಐಷಾರಾಮಿ ಕಾರುಗಳು ಮತ್ತು ಇತರ ಹಲವು ದುಬಾರಿ ವಸ್ತುಗಳ ಸಂಗ್ರಹವಿದೆ.ರೇಂಜ್ ರೋವರ್, ಮರ್ಸಿಡಿಸ್ ಬೆಂಜ್, ಆಡಿ, ಬಿಎಂಡಬ್ಲ್ಯು ಮುಂತಾದ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಒಟ್ಟು ಮೌಲ್ಯ ರೂ. 3 ಕೋಟಿ. BMW 7-Series, Jaguar XF, Range Rover Evoque, Porsche Cayenne ನಂತಹ ಕಾರುಗಳು ಇವರ ಬಳಿ ಇವೆ.
ಸಾನಿಯಾ ಇತ್ತೀಚೆಗಷ್ಟೇ ವೃತ್ತಿಪರ ಟೆನಿಸ್ನಿಂದ ನಿವೃತ್ತಿ ಘೋಷಿಸಿದ್ದರು. WTA ಸಿಂಗಲ್ಸ್ ಶ್ರೇಯಾಂಕದಲ್ಲಿ ಅಗ್ರ 30 ರೊಳಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆ.ಸಾನಿಯಾ ತಮ್ಮ ವೃತ್ತಿ ಜೀವನದಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ಇದರಲ್ಲಿ ಮೂರು ಮಹಿಳಾ ಡಬಲ್ಸ್ ಮತ್ತು ಮೂರು ಮಿಶ್ರ ಡಬಲ್ಸ್ ಸೇರಿವೆ.ಅವರು ಅಡಿಡಾಸ್, ಗಟೋರೇಡ್ ಮತ್ತು ಹರ್ಬಲೈಫ್ ಸೇರಿದಂತೆ ಹಲವಾರು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.ಸಾನಿಯಾ ಮಿರ್ಜಾ ಇಷ್ಟೊಂದು ಆಸ್ತಿಯ ಒಡತಿ ಆಗಿರುವುದರಿಂದ ಈಕೆಗೆ ಮಾಜಿ ಪತಿ ಶೋಯೆಬ್ ನಿಂದ ಯಾವ ಜೀವನಾಂಶದ ಅಗತ್ಯತೆ ಇಲ್ಲ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.