ನ್ಯೂಸ್ ನಾಟೌಟ್ :ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಿರುವ ಸಂತಸದಲ್ಲಿ ರಾಮಭಕ್ತರು ತಾಲಾಡುತ್ತಿದ್ದರೆ ಇತ್ತ ಯುವಕನೋರ್ವ “ಒಂದು ದಿನ ಬಾಬರಿ ಮಸೀದಿ ಮತ್ತೆ (babri Masjid resurrection) ಎದ್ದು ನಿಲ್ಲಲಿದೆ” ಎಂಬ ವಿವಾದಾತ್ಮಕ ಪೋಸ್ಟ್ (Controversial FB Post) ಹಾಕಿಸಮಾಜದಲ್ಲಿ ಶಾಂತಿ ಕದಡುವಂತೆ ಮಾಡಿದ್ದಾನೆ.
ಇದೀಗ ಪೊಲೀಸರು ಆತನ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.ಕೊಪ್ಪಳದ ಶ್ರೀಶೈಲ ನಗರದ ನಿವಾಸಿಯಾಗಿರುವ ಆಲಿಖಾನ್ ಯಲಬುರ್ಗಾ ಎಂಬವರ ಪುತ್ರನಾಗಿರುವ 25 ವರ್ಷದ ಶಾರುಖ್ ಖಾನ್ ವಿರುದ್ಧ ಸಂತೋಷ್ ಡಿ. ಹಳ್ಳೂರ್ ಅವರು ನೀಡಿದ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಪ್ಲಂಬಿಂಗ್ ಕೆಲಸ ಮಾಡುತ್ತಿರುವ ಈ ಶಾರುಖ್ ಖಾನ್ ತನ್ನ ಫೇಸ್ಬುಕ್ನಲ್ಲಿ ವಿವಾದಾತ್ಮಕ ಮತ್ತು ಸಮಾಜದ ಶಾಂತಿ ಕದಡುವ ರೀತಿಯ ಪೋಸ್ಟ್ ಹಾಕಿದ್ದಾನೆ ಎಂದು ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಮಂದಿರ ಒಂದಲ್ಲ, ನೂರು, ಸಾವಿರ ಕಟ್ಟಿಕೊಳ್ಳಲಿ. ನಮ್ಮ ವಿರೋಧವಿಲ್ಲ.ಆದರೆ, ಮಸೀದಿಯನ್ನು ಕೆಡವಿ ಅದರ ಮೇಲೆ ನಿರ್ಮಿಸುವ ಮಂದಿರಕ್ಕೆ ನಮ್ಮ ವಿರೋಧವಿದೆ. ಇಷ್ಟೇ ಅಲ್ಲಾ.. ಒಂದು ದಿನ ಬಾಬರಿ ಮಸೀದಿ ಎದ್ದು ನಿಲ್ಲಲಿದೆ ಎಂದು ಈ ಶಾರುಖ್ ಖಾನ್ ಪೋಸ್ಟ್ ಮಾಡಿದ್ದಾನೆ. ಜನವರಿ 20ರಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಈ ಹೇಳಿಕೆ ಸಾಮಾಜಿಕ ಶಾಂತಿಯನ್ನು ಕದಡಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊಪ್ಪಳದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.