ನ್ಯೂಸ್ ನಾಟೌಟ್ : ಚೀನಾದ ದಕ್ಷಿಣ ಕ್ಸಿನ್ಜಿಯಾಂಗ್ನಲ್ಲಿ ಅಯೋಧ್ಯ ರಾಮ ಪ್ರತಿಷ್ಠೆಯಂದೇ ರಾತ್ರಿ ಅಂದರೆ ಸೋಮವಾರ ತಡರಾತ್ರಿ 7.2 ತೀವ್ರತೆಯ ಪ್ರಬಲ ಭೂಕಂಪನ (Earthquake) ಸಂಭವಿಸಿದ್ದು, ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿ ತಿಳಿಸಿದೆ.
ಸದ್ಯ ಯಾವುದೇ ಸಾ * ವು-ನೋವುಗಳು ಸಂಭವಿಸಿಲ್ಲ. ಆಸ್ತಿಪಾಸ್ತಿ ಹಾನಿಯಾದ ಬಗ್ಗೆಯೂ ವರದಿಯಾಗಿಲ್ಲ.
ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ 7.2 ಎಂದು ಗುರುತಿಸಲಾಗಿದ್ದು, ಸುಮಾರು 80 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಇದೇ ಜನವರಿ 11ರಂದು ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆ ಭೂಕಂಪ ಸಂಭವಿಸಿದ ನಂತರ ದೆಹಲಿ ಮತ್ತು ಎನ್ಸಿಆರ್ನಲ್ಲಿ ಲಘು ಭೂಕಂಪ ಸಂಭವಿಸಿದ್ದವು. ಕಾಬೂಲ್ನಿಂದ ಈಶಾನ್ಯಕ್ಕೆ 241 ಕಿಮೀ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿತ್ತು. ಪಾಕಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು.
ಸೋಮವಾರ ಬೆಳಿಗ್ಗೆ ಈಶಾನ್ಯ ಚೀನಾದ ಗುಡ್ಡಗಾಡು ಹಾಗೂ ಪರ್ವತ ಶ್ರೇಣಿಯಲ್ಲಿ ಭೂಕಂಪ ಸಂಭವಿಸಿದ್ದು, 47 ಮಂದಿ ಜೀವಂತ ಸ * ಮಾಧಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.