ನ್ಯೂಸ್ ನಾಟೌಟ್ : ಶ್ರೀಲಂಕಾದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಭಾರತದ ತಮಿಳುನಾಡಿನ 18 ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಂಧಿಸಿದೆ.
ಜ.17ರ ಸಂಜೆ ಶ್ರೀಲಂಕಾ ಜಲಪ್ರದೇಶದಲ್ಲಿ ಶ್ರೀಲಂಕಾ ನೌಕಾಪಡೆಯು 18 ಭಾರತೀಯ ಮೀನುಗಾರರನ್ನು ಬಂಧಿಸಿದ್ದು ಈ ಬಗ್ಗೆ ಭಾರತ ಸರ್ಕಾರ ಈಗ(ಜ.22) ಮಾಹಿತಿ ಹಂಚಿಕೊಂಡಿದೆ.
ಶ್ರೀಲಂಕಾದ ಜಲಪ್ರದೇಶದಿಂದ ಭಾರತೀಯ ಕಳ್ಳಬೇಟೆ ಟ್ರಾಲರ್ಗಳ (ಮೀನುಗಾರಿಕಾ ಬೋಟ್ ಗಳು)ನ್ನು ಓಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಳ್ಳಬೇಟೆ ಕುರಿತು ಶ್ರೀಲಂಕಾ ನೌಕಾಪಡೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ತಮಿಳುನಾಡಿನ 18 ಮೀನುಗಾರರು ಸಿಕ್ಕಿಬಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ 02 ಭಾರತೀಯ ಟ್ರಾಲರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಭಾರತ ಮತ್ತು ಶ್ರೀಲಂಕಾ ನಡುವೆ ಜಾಗತಿಕ ಮಟ್ಟದಲ್ಲಿ ಉತ್ತಮ ಬಾಂಧವ್ಯವಿದೆಯಾದರೂ, ಇಲ್ಲಿ ನಡೆಯುವ ಅಕ್ರಮ ಮೀನುಗಾರಿಕೆ ಉಭಯ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ. ಲಂಕಾ ನೌಕಾಪಡೆಯ ಸಿಬ್ಬಂದಿ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಸಾಕಷ್ಟು ಬಾರಿ ಗುಂಡು ಹಾರಿಸಿದ್ದಾರೆ ಮತ್ತು ಶ್ರೀಲಂಕಾದ ಪ್ರಾದೇಶಿಕ ಜಲವನ್ನು ಅಕ್ರಮವಾಗಿ ಪ್ರವೇಶಿಸಿದ ಹಲವಾರು ಘಟನೆಗಳಲ್ಲಿ ಅವರ ದೋಣಿಗಳನ್ನು ವಶಪಡಿಸಿಕೊಂಡ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.