ಮಂಗಳೂರು; ಇಲ್ಲಿನ ಹೊರವಲಯದ ಅಡ್ಡೂರು ಸಮೀಪದ ಕಾಜಿಲ ಎಂಬಲ್ಲಿ ನಡೆದ ಟಿಪ್ಪರ್-ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಆಸ್ನಾ ತನ್ನ ತಾಯಿ ರೆಹನಾರೊಂದಿಗೆ ರಿಕ್ಷಾದಲ್ಲಿ ಗುರುಪುರ ಕೈಕಂಬದತ್ತ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೈಕಂಬದತ್ತ ಹೋಗುತ್ತಿದ್ದಾಗ ಪೊಳಲಿ ದ್ವಾರದಿಂದ ಅಡ್ಡೂರಿನತ್ತ ಚಲಿಸುತ್ತಿದ್ದ ಟಿಪ್ಪರ್ ಢಿಕ್ಕಿಯಾಗಿದೆ. ಅಪಘಾತದಲ್ಲಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿ ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟಿತ್ತು, ತಕ್ಷಣ ಸ್ಥಳೀಯರು ಗಂಭೀರ ಗಾಯಗೊಂಡಿದ್ದ ತಾಯಿ ಹಾಗೂ ಮಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಬಾಲಕಿ ಆಸ್ನಾ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಟಿಪ್ಪರ್ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆ ಹಾಗೂ ರಾಂಗ್ ಸೈಡ್ನಲ್ಲಿ ಸಂಚಾರವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.