ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣ ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ ಕೂಡ.ಕೆಲವರಂತು ಇದರಲ್ಲೇ ಮುಳುಗಿ ಹೋಗಿರುವ ದೃಶ್ಯ ಸಾಮಾನ್ಯವೆಂಬಂತಿದೆ.ಇನ್ನೂ ಕೆಲವರು ಹೆಚ್ಚು ವೀಕ್ಷಣೆಗಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಗನ್ ಹಿಡಿದುಕೊಂಡು ರೀಲ್ಸ್ ಮಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ ಘಟನೆ ಬಗ್ಗೆ ವರದಿಯಾಗಿದೆ.
ಈ ಸಂಬಂಧ ಕೇಂದ್ರದ ಅಪರಾಧ ವಿಭಾಗದ ಪೊಲೀಸರು 26 ವರ್ಷದ ಯುವಕ ಶಶಾಂಕ್ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಈತ ಹಲವು ಬಾರಿ ಮಾರಾಕಾಸ್ತ್ರಗಳು, ಗನ್ ಹಿಡಿದು ವಿಡಿಯೋ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಶಶಾಂಕ್ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಹುಳಿಮಾವು ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣದಲ್ಲಿ ಶಶಾಂಕ್ ನಂಟು ಇದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ರಾಜಾಜಿನಗರ ಮತ್ತು ತಿಲಕನಗರದಲ್ಲಿ ಕಳ್ಳತನ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿಯೂ ಹಲವು ಪ್ರಕರಣಗಳ ಬಗ್ಗೆಯೂ ದೂರು ದಾಖಲಾಗಿತ್ತು.