ನ್ಯೂಸ್ ನಾಟೌಟ್ : ‘ವಿದ್ಯಾರ್ಥಿಗಳೇ ಜನವರಿ 22ರಂದು ಸ್ವಯಂ ರಜೆ ಪಡೆಯಿರಿ’ ಅಂತ ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸ್ವಯಂ ರಜೆ ಪಡೆಯಲು ಕರೆ ನೀಡಿರುವ ಪೋಸ್ಟ್ ಸಕತ್ ವೈರಲ್ ಆಗಿದೆ.
ರಜೆ ಮಾಡಿ ರಾಮೋತ್ಸವದಲ್ಲಿ ಭಾಗಿಯಾಗಿ, ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ. ರಜೆ ಘೋಷಣೆ ಮಾಡದೆ ಹಿಂದೂಗಳ ಭಾವನೆ ಜೊತೆ ಚೆಲ್ಲಾಟ ಆಡುತ್ತಿದೆ. ಹಲವಾರು ರಾಜ್ಯಗಳು ರಜೆ ಘೋಷಿಸಿದರೂ ಕರ್ನಾಟಕ ಮಾತ್ರ ರಜೆ ಘೋಷಣೆ ಮಾಡಿಲ್ಲ ಅಂತ ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ.
ಇನ್ನೂ ರಾಜ್ಯದ ರಾಮಭಕ್ತರು ನಾಳೆ ಪುಣ್ಯ ಪಾವನ ಕ್ಷಣ ಸಂಭ್ರಮಿಸಲು ಕರೆ ಕೊಟ್ಟಿದ್ದಾರೆ. ಒಂದು ವೇಳೆ ರಜೆ ಪಡೆದವರ ವಿರುದ್ಧ ಕ್ರಮ ಕೈಗೊಂಡರೆ ಶಾಸಕನಾಗಿ ಜೊತೆಗೆ ನಿಲ್ಲುತ್ತೇನೆ ಅಂತ ಭರವಸೆಯನ್ನೂ ನೀಡಿದ್ದಾರೆ.