ನ್ಯೂಸ್ ನಾಟೌಟ್: ಜ.22 ರಂದು ರಾಮ ಮಂದಿರ ಉದ್ಘಾಟನೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಲೆಗೆ ರಜೆ ನೀಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.ಈ ಒಂದು ಸಂಭ್ರಮವನ್ನು ಮಕ್ಕಳು ಕೂಡ ಕಣ್ತುಂಬಿ ಕೊಳ್ಳಬೇಕು ಎನ್ನುವ ಸದುದ್ದೇಶದಿಂದ ಅವತ್ತು ಮಕ್ಕಳಿಗೆ ರಜೆ ನೀಡಿ ಎನ್ನುವ ಮನವಿಯನ್ನು ಮಾಡಲಾಗಿತ್ತು.ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.
ಆದರೆ ಅಂದು ಶಾಲೆಗೆ ರಜೆ ಹಾಕಿದರೇ ಸಾವಿರ ರೂ.ದಂಡ ಹಾಕುವುದಾಗಿ ಚಿಕ್ಕಮಗಳೂರು ನಗರದ ಖಾಸಗಿ ಶಾಲೆಯೊಂದರ ಮಕ್ಕಳಿಗೆ ಆರೋಪ ಮಾಡಿದ್ದು, ಶಾಲೆಯ ವಿರುದ್ಧ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಆಕ್ರೋಶ ಹೊರ ಹಾಕಿದೆ.ಅಯೋಧ್ಯೆಯಲ್ಲಿ ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ದಿನ ರಾಜ್ಯದ ಎಲ್ಲಾ ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಸರ್ಕಾರವೇ ಆದೇಶಿಸಿದೆ. ಜ.22ರಂದು ಶಾಲೆಗಳಿಗೆ ರಜೆ ನೀಡಬೇಕೋ… ಬೇಡವೋ ಎಂಬ ಕುರಿತು ಸರ್ಕಾರ ಕೂಡ ಗೊಂದಲದಲ್ಲಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಮಕ್ಕಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಹಿಂದೂ ಪರ ಸಂಘಟನೆಗಳು ಶಾಲೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜ.22ರಂದು ಯಾವುದೇ ಮಕ್ಕಳಿಗೆ ರಾಮ ಮಂದಿರದ ಲೈವ್ ನೋಡಬೇಕು ಅನ್ನಿಸಿದರೆ ರಜೆ ಹಾಕಿ ಮನೆಯಲ್ಲೇ ನೋಡಿ. ಜಿಲ್ಲೆಯ ಯಾವುದೇ ಶಾಲೆಯ ಯಾವುದೇ ಮಕ್ಕಳಿಗೆ ಯಾರಾದರೂ ದಂಡ ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಆರೋಪ ನೀಡಿದ್ದಾರೆ.ಈ ವೇಳೆ ಸ್ಥಳಕ್ಕೆ ಎ.ಎಸ್ಪಿ. ಕೃಷ್ಣಮೂರ್ತಿ ಭೇಟಿ ನೀಡಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಜೊತೆ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಬಳಿ ಮಾತನಾಡುವುದಾಗಿ ಹೇಳಿದರು. ಶಾಲೆಗೆ ಪ್ರಭಾರ ಡಿಡಿಪಿಐ ಪ್ರಕಾಶ್ ಭೇಟಿ ನೀಡಿದ್ದು, ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿವುದಾಗಿ ತಿಳಿಸಿದರು.