ನ್ಯೂಸ್ ನಾಟೌಟ್ :ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದ ಹಾಗೆ ಬಾಲರಾಮನ ವಿಗ್ರಹದ ಕುರಿತು ಭಾರಿ ಚರ್ಚೆಗಳು ನಡಿತಿವೆ. ಶುಕ್ರವಾರ (ಜನವರಿ 19) ಬಾಲರಾಮನ ವಿಗ್ರಹದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಮೊದಲಿಗೆ ಪೀತಾಂಬರದಿಂದ ಕಣ್ಣುಗಳನ್ನು ಮುಚ್ಚಿರುವ ಬಾಲರಾಮನ ಫೋಟೋಗಳು ವೈರಲ್ ಆದವು. ತದನಂತರ ಬಾಲರಾಮನ ಕಣ್ಣುಗಳು ಗೋಚರಿಸುವ ಫೋಟೋಗಳು ವೈರಲ್ ಆದವು. ಆದರೆ ಈ ಎರಡನೇ ಫೋಟೋ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹ ಇದೀಗ ಕೇಳಿಬರುತ್ತಿದೆ.
ಹೌದು, ಬಾಲರಾಮನ ವಿಗ್ರಹದ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು, ‘ಪ್ರಾಣ ಪ್ರತಿಷ್ಠೆ ಪೂರ್ಣಗೊಳ್ಳುವ ಮೊದಲು ವಿಗ್ರಹದ ಕಣ್ಣುಗಳನ್ನು ತೆರೆಯಲಾಗುವುದಿಲ್ಲ. ಆದರೆ ರಾಮನ ಕಣ್ಣುಗಳು ಗೋಚರಿಸುವ ವಿಗ್ರಹವು ನಿಜವಾದ ವಿಗ್ರಹವಲ್ಲ. ಒಂದು ವೇಳೆ ಕಣ್ಣುಗಳು ಗೋಚರಿಸಿದರೆ, ಆ ಕಣ್ಣುಗಳನ್ನು ಯಾರು ತೋರಿಸಿದರು ಮತ್ತು ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದನ್ನು ಸಮಗ್ರ ತನಿಖೆಗೊಳಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಶುಕ್ರವಾರದಂದು ಸಂಪೂರ್ಣ ವಿಧಿವಿಧಾನಗಳೊಂದಿಗೆ ಗರ್ಭಗುಡಿಯಲ್ಲಿ ಈ ಬಾಲರಾಮನ ವಿಗ್ರಹವನ್ನು ಇರಿಸಲಾಗಿದೆ. ಈ ವಿಗ್ರಹವನ್ನು ಜನವರಿ 22 ರಂದು ಪ್ರತಿಷ್ಠಾಪಿಸಲಾಗುವುದು. ನಂತರ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ವಿಗ್ರಹವನ್ನು ಗರ್ಭಗುಡಿಯಲ್ಲಿ ಇರಿಸಿದ ನಂತರ, ಅದರ ಫೋಟೋವನ್ನು ದೇವಾಲಯದ ಆಡಳಿತವು ಬಿಡುಗಡೆ ಮಾಡಿತು, ಅದರಲ್ಲಿ ಕಣ್ಣುಗಳನ್ನು ಪೀತಾಂಬರದಿಂದ ಮುಚ್ಚಲಾಗಿತ್ತು.ಆದರೆ ಕಣ್ಣುಗಳಿರುವ ಫೋಟೋಗಳು ಹೇಗೆ ವೈರಲ್ ಆಗಿದ್ದಾವೆ ಅನ್ನೊದರ ಬಗ್ಗೆ ಪ್ರಸ್ನೆ ಬುಗಿಲೆದ್ದಿದೆ.
ಭಕ್ತರು ಸುಮಾರು 35 ಅಡಿ ದೂರದಿಂದ ವಿಗ್ರಹವನ್ನು ನೋಡಬೇಕು. ಮತ್ತೊಂದೆಡೆ, ದೇವಾಲಯದೊಳಗೆ ವಿಗ್ರಹವನ್ನು ಇರಿಸುವ ಕೆಲವು ದಿನಗಳ ಮೊದಲು ಚಿತ್ರಗಳನ್ನು ತೆಗೆದಿರಬಹುದು ಮತ್ತು ಅದನ್ನು ಈಗ ಪ್ರಸಾರ ಮಾಡಲಾಗುತ್ತಿದೆ ಎಂದು ವಿಎಚ್ಪಿ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಮೂರ್ತಿಯ ಮೊದಲ ಚಿತ್ರ ಜನವರಿ 22 ರಂದು ಮಾತ್ರ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.