ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ತೆರೆಮರೆಯಲ್ಲಿದ್ದ ಹಲವು ಪ್ರತಿಭೆಗಳು ಇದೀಗ ಹೊರ ಜಗತ್ತಿಗೆ ಬಂದು ಗುರುತಿಸಿಕೊಳ್ಳುತ್ತಿದ್ದಾರೆ.ಇದೀಗ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ayodhya Rama Mandir) ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡುವ ಪುರೋಹಿತ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೊಬ್ಬರು (Samskrit Scholar) ಆಯ್ಕೆಯಾಗಿದ್ದಾರೆ. ಅವರ ಹೆಸರೇ ಡಾ.ಕೆ ಗಣಪತಿ ಭಟ್ (Dr. Ganapati Bhat)..!
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕೇಮನಬಳ್ಳಿಯವರಾದ ಇವರು ಶಾರದಾ ಮತ್ತು ಗೋಪಾಲಕೃಷ್ಣ ಭಟ್ ಅವರ ಪುತ್ರ. ಡಾ. ಕೆ. ಗಣೇಶ ಭಟ್ ಅವರು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿ.ವಿಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಜ. 22ರಂದು ಅಯೋಧ್ಯೆಯಲ್ಲಿ ಪ್ರತಿಷ್ಠೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಧಾರ್ಮಿಕ ವಿಧಿ ವಿಧಾನಗಳು ಜ. 16ರಿಂದ ಆರಂಭಗೊಂಡಿದ್ದು, ಕಾಶಿಯ ಖ್ಯಾತ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ.
ವಿಶೇಷ ಸಂಗತಿಯೆಂದರೆ ರಾಮಲಲ್ಲಾನ ವಿಗ್ರಹ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಈಗಾಗ್ಲೇ 101 ಮಂದಿ ಪ್ರಧಾನ ಪುರೋಹಿತರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಕರ್ನಾಟದವರು ಒಬ್ಬರೇ ಒಬ್ಬರು ಆಯ್ಕೆಯಾಗಿದ್ದು, ಅವರು ಕರಾವಳಿಯವರು ಎಂಬುದೇ ಎಲ್ಲರೂ ಹೆಮ್ಮೆ ಪಡುವ ವಿಚಾರ.ಡಾ.ಕೆ.ಗಣಪತಿ ಭಟ್ ಒಬ್ಬರು.ಇವರ ನಾಯಕತ್ವದಲ್ಲಿ 40 ಮಂದಿ ಆರ್ಚಕರೂ ಇರಲಿದ್ದಾರೆ.
ಡಾ. ಕೆ. ಗಣಪತಿ ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಪುರೋಹಿತರಾಗಿದ್ದು,1962ರಲ್ಲಿ ಜನಿಸಿದ ಡಾ.ಕೆ.ಗಣಪತಿ ಭಟ್ ಜಾಲ್ಸೂರು ಗ್ರಾಮದ ಕೆಮನಬಳ್ಳಿಯ ಸ.ಕಿ.ಪ್ರಾ. ಶಾಲೆಯಲ್ಲಿ 4ನೇ ತರಗತಿವರೆಗೆ, ಅಡ್ಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಶಿಕ್ಷಣ ಪೂರೈಸಿದರು. ಪ್ರೌಢ ಶಿಕ್ಷಣವನ್ನು ಪೆರ್ನಾಜೆಯ ಪ್ರೌಢಶಾಲೆಯಲ್ಲಿ ಪಡೆದರು. 1978ರಲ್ಲಿ ಕಾಂಚಿ ಕಾಮಕೋಟಿ ವಿದ್ಯಾಪೀಠದಲ್ಲಿ ಋಗ್ವೇದದಲ್ಲಿ ಪದವಿ ಶಿಕ್ಷಣ ಪಡೆದರು.