ನ್ಯೂಸ್ ನಾಟೌಟ್ :ಅಣ್ಣ ಅಂದ್ರೆ ತನ್ನ ಸಹೋದರಿಯ ರಕ್ಷಣೆಗೆ ನಿಲ್ಲುವವ..ಸಹೋದರಿಯರಿಗೂ ಅಣ್ಣನೆಂದ್ರೆ ಧೈರ್ಯ..ಆದರೆ ಇಲ್ಲೊಬ್ಬ ಸಹೋದರ ‘ಅಣ್ಣ’ ಎನ್ನುವ ಪದಕ್ಕೆ ಮಸಿ ಬಳಿಯುವ ಹೇಯ ಕೃತ್ಯವೆಸಗಿದ್ದಾನೆ.ಹೌದು, ಈತನಿಂದಾಗಿ ತನ್ನ ತಂಗಿಯೇ ಗರ್ಭ ಧರಿಸಿದ್ದು, ಇದೀಗ ಆಕೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬಗ್ಗೆ ವರದಿಯಾಗಿದೆ.
ಈಕೆ 10ನೇ ತರಗತಿಯಲ್ಲಿ ಕಲಿಯುತ್ತಿರುವ 15 ವರ್ಷದ ಬಾಲಕಿ.ಕಲಬುರಗಿ ಜಿಲ್ಲೆಯ (Kalaburagi News) ಅಳಂದದಲ್ಲಿ ಈ ಘಟನೆ ಸಂಭವಿಸಿದೆ. ಆಳಂದ ತಾಲೂಕಿನ ವಾಸಿಯಾಗಿರುವ ಈ ಯುವತಿ ಗರ್ಭ ಧರಿಸಲು ಆಕೆಯ ಅಣ್ಣನೇ ಕಾರಣ ಎಂದು ಹೇಳಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಅಣ್ಣ ಎಂದರೆ ಅವರು ಒಡಹುಟ್ಟಿದವನೇನೂ ಅಲ್ಲ. ಬದಲಾಗಿ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದ ದೊಡ್ಡಪ್ಪನ ಮಗನೇ ಆಕೆಯನ್ನು ಈ ರೀತಿಯಾಗಿ ಬಳಸಿಕೊಂಡು ಗರ್ಭಿಣಿಯಾಗಿ ಮಾಡಿದ ಪಾಪಿ..!
ಈ ವಿದ್ಯಾರ್ಥಿನಿ ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಶಾಲೆಯಲ್ಲಿ ವಾಸವಾಗಿದ್ದು ಓದು ಮುಂದುವರಿಸಿದ್ದಳು. ಶಾಲೆಗೆ ರಜೆ ಇದ್ದಾಗ ಮಾತ್ರ ಮನೆಗೆ ಬರುತ್ತಿದ್ದಳು. ಅವರದು ಕೂಡು ಕುಟುಂಬ. ಆಕೆ ಮನೆಗೆ ಬಂದಾಗಲೆಲ್ಲ ಆಕೆಯ ಅಣ್ಣನ ಮಗ ಆಕೆಯನ್ನು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.ರಾತ್ರಿ ವೇಳೆ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಆಕೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಕಳೆದ ಏಪ್ರಿಲ್ ತಿಂಗಳಲ್ಲಿ ಆಕೆ ರಜೆಯಲ್ಲಿ ಮನೆಗೆ ಬಂದಿದ್ದಾಗ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಮಾತ್ರವಲ್ಲದೇ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಕೂಡ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಆಕೆ ಯಾರಿಗೂ ಈ ವಿಚಾರವನ್ನು ಹೇಳಿರಲಿಲ್ಲವೆಂದು ತಿಳಿದು ಬಂದಿದೆ.
ಈ ನಡುವೆ ಆಕೆ ಗರ್ಭಿಣಿಯಾಗಿದ್ದಳು. ಆದರೆ ಆಕೆ ಗರ್ಭಿಣಿಯಾಗಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ಆಕೆಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಶಿಕ್ಷಕರಿಗೆ ಹೇಳಿ ಆಕೆ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ನಂತರ ಸಂಬಂಧಿಕರು ವಿದ್ಯಾರ್ಥಿನಿ ಕುಟಂಬದವರಿಗೆ ಮಾಹಿತಿ ನೀಡಿದ ನಂತರ ಆಕೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ದಾಖಲು ಮಾಡುತ್ತಿದ್ದಂತೆಯೇ ಆಕೆ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ಕೊಟ್ಟಿರುವ ವಿಚಾರ ಗೊತ್ತಾಗ್ತಿದ್ದಂತೆ ಕುಟುಂಬಸ್ಥರು ಕೂಡ ಶಾಕ್ ಆಗಿದ್ದಾರೆ. ಯಾಕೆಂದರೆ ಅವರ್ಯಾರಿಗೂ ಅದರ ಸುಳಿವೇ ಇರಲಿಲ್ಲ. ಯುವತಿ ಮೊದಲೇ ಸ್ವಲ್ಪ ದಪ್ಪ ಇದ್ದಿದ್ದರಿಂದ ಆಕೆಯ ಹೊಟ್ಟೆ ದಪ್ಪ ಆಗಿದ್ದು ಯಾರ ಅರಿವಿಗೂ ಬಂದಿರಲಿಲ್ಲ. ಆಕೆ ಮನೆಯಲ್ಲಿ ಇಲ್ಲದೆ ಹಾಸ್ಟೆಲ್ನಲ್ಲಿ ಇದ್ದಿದ್ದರಿಂದ ಮಾಸಿಕ ಋತುಸ್ರಾವ ಆಕೆಗಿದೆಯೇ ಇಲ್ಲವೇ ಎನ್ನುವುದು ಕೂಡಾ ಅವರ ಅರಿವಿಗೆ ಬಂದಿರಲಿಲ್ಲ.
ಮಹಾರಾಷ್ಟ್ರ ಪೊಲೀಸರು ನಿಂಬರ್ಗಾ ಪೊಲೀಸರನ್ನು ಸಂಪರ್ಕ ಮಾಡಿ ವಿಷಯವನ್ನು ತಿಳಿಸಿದ್ದು, ನಿಂಬರ್ಗಾ ಪೊಲೀಸರು ವಿದ್ಯಾರ್ಥಿನಿಯ ವಿಚಾರಣೆ ನಡೆಸಿದಾಗ ಅಣ್ಣನಿಂದಲೇ ಆಕೆ ಅತ್ಯಾಚಾರಕ್ಕೆ ಒಳಗಾಗಿದ್ದು ಬಯಲಾಯಿತು.