ನ್ಯೂಸ್ ನಾಟೌಟ್ :ಮಹಿಳೆಯೊಬ್ಬರು ಕಳೆದು ಕೊಂಡ ಪರ್ಸನ್ನು ಅರ್ಚಕರೊಬ್ಬರು ಮತ್ತೆ ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆಯೊಂದು ಉಪ್ಪಿನಂಗಡಿಯಿಂದ ವರದಿಯಾಗಿದೆ.ಪರ್ಸ್ನೊಳಗೆ ಮೂರು ಪವನ್ ತೂಕದ ಚಿನ್ನಾಭರಣವಿದ್ದು,ಪರ್ಸ್ ಕಳೆದು ಹೋಗಿರುವುದರಿಂದ ಮಹಿಳೆ ಆತಂಕಗೊಂಡಿದ್ದರು.ಮತ್ತೆ ಮಹಿಳೆ ದೇವಸ್ಥಾನಕ್ಕೆ ಬಂದು ವಿಚಾರಿಸಿದಾಗ ಆ ಪರ್ಸನ್ನು ಅರ್ಚಕರು ಅವರಿಗೆ ವಾಪಾಸ್ ಹಿಂತಿರುಗಿಸಿದ್ದಾರೆ.
ಮಹಿಳಾ ಭಕ್ತೆಯಾದ ಮಂಜುಳಾ ಎಂಬುವವರು ಕಾರಣಿಕ ಕ್ಷೇತ್ರವಾದ ಉಪ್ಪಿನಂಗಡಿಯ ಶ್ರೀ ಮಹಾಕಾಳಿ ದೇವಾಲಯಕ್ಕೆ ಭೇಟಿ ನೀಡಿದ್ದರು.ಈ ವೇಳೆ ದೇವರ ದರ್ಶನ ಪಡೆದು ಮನೆ ಹಿಂತಿರುಗಿದರು.ಮನೆಗೆ ಬಂದು ನೋಡಿದಾಗ ಕೈಯಲ್ಲಿದ್ದ ಪರ್ಸ್ ಕಳೆದು ಹೋಗಿದೆ.ಈ ಸಂದರ್ಭ ಆತಂಕಗೊಂಡ ಅವರು ಹುಡುಕಾಟ ನಡೆಸಲು ಆರಂಭಿಸಿದ್ದಾರೆ. ದೇಗುಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದ್ದರಿಂದ ಪರ್ಸ್ ಕಳೆದು ಹೋಗಿದ್ದೇ ಅವರ ಗಮನಕ್ಕೆ ಬಂದಿರಲಿಲ್ಲ.ಅನಂತರ ದೇಗುಲಕ್ಕೆ ತೆರಳಿ ಹುಡುಕಾಟ ನಡೆಸಿದರೂ ಪರ್ಸ್ ಪತ್ತೆಯಾಗಿರಲಿಲ್ಲ.
ಬಳಿಕ ಅಲ್ಲೇ ಇದ್ದ ದೇವಾಲಯದ ಸಹಾಯಕ ಅರ್ಚಕ ಅನಂತಕೃಷ್ಣ ಅವರು ಮಹಿಳೆಯನ್ನು ವಿಚಾರಿಸಿ, ದೇಗುಲದಲ್ಲಿ ಭಕ್ತರು ಸಮರ್ಪಿಸುವ ಎಳ್ಳೆಣ್ಣೆಯ ಬಳಿ ಸಣ್ಣ ಪರ್ಸ್ ಸಿಕ್ಕಿರುವುದಾಗಿ ಅವರಿಗೆ ತಿಳಿಸಿದರು.ಅದನ್ನು ಅವರದ್ದೇ ಎಂದು ತಂದು ತೋರಿಸಿದಾಗ ಮಹಿಳೆಯ ಪರ್ಸ್ ಎಂದು ಖಾತ್ರಿಯಾಯಿತು.ಪರ್ಸ್ನೊಳಗೆ 3 ಪವನ್ ತೂಕದ ಚಿನ್ನಾಭರಣ ಯಥಾಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ.