ನ್ಯೂಸ್ ನಾಟೌಟ್ : ಕೆಜಿಎಫ್, ಕಾಂತಾರ ಚಿತ್ರಗಳು ತೆರೆ ಮೇಲೆ ಬಂದು ಮೋಡಿ ಮಾಡಿದ್ದವು.ಇಡೀ ವಿಶ್ವದಲ್ಲಿಯೇ ಈ ಎರಡು ಚಿತ್ರಗಳು ಭಾರಿ ಸಂಚಲನವನ್ನು ಸೃಷ್ಟಿಸುವಂತೆ ಮಾಡಿದ್ದವು.ಈ ಚಿತ್ರವನ್ನು ಮೀರಿಸುವಂತಹ ಚಿತ್ರಗಳು ತೆರೆ ಮೇಲೆ ಇದುವರೆಗೆ ಯಾವುದೂ ಮೂಡಿ ಬಂದಿರಲಿಲ್ಲ. ಇದೀಗ ಈ ಒಂದು ಚಿತ್ರ ಭಾರಿ ಸದ್ದು ಮಾಡುತ್ತಿದೆ. ಮಾತ್ರವಲ್ಲ ಕಾಂತಾರ ಮತ್ತು ಕೆಜಿಎಫ್ ಚಿತ್ರವನ್ನೇ ಹಿಂದಿಕ್ಕಿ ದಾಖಲೆ ಸೃಷ್ಟಿಸುವತ್ತ ಹೆಜ್ಜೆಯಿಡುತ್ತಿದೆ. ಹಾಗಾದರೆ ಆ ಚಿತ್ರ ಯಾವುದು ಗೊತ್ತಾ..? ಇಲ್ಲಿ ಓದಿ…
ಯುವ ನಟ ತೇಜ ಸಜ್ಜಾ ನಟನೆಯ ‘ಹನುಮಾನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಇದೀಗ ಘರ್ಜಿಸುತ್ತಿದೆ. ದೊಡ್ಡ ಸಿನಿಮಾಗಳನ್ನು ಹಿಂದಿಕ್ಕಿ, ತೆಲುಗು, ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿಯಲ್ಲೂ ಹೊಸ ದಾಖಲೆ ಸೃಷ್ಟಿಸುತ್ತಿದೆ.. ಇದೀಗ ‘ಹನುಮಾನ್’ ಚಿತ್ರವು ಎರಡು ಕನ್ನಡ ಚಿತ್ರಗಳ ದಾಖಲೆಗಳನ್ನು ಮುರಿದಿದೆ ಅಂದ್ರೆ ನೀವು ಅಚ್ಚರಿ ಪಡುತ್ತೀರಾ…
ಉತ್ತರದಲ್ಲಿ ಹನುಮಾನ್ ಚಿತ್ರ ಅಭೂತಪೂರ್ವ ಜನಪ್ರಿಯತೆ ಗಳಿಸುತ್ತಿದ್ದು, ದಾಖಲೆಯ ಕಲೆಕ್ಷನ್ ಗಳಿಸುತ್ತಿದೆ. ಉತ್ತರ ಭಾರತದಲ್ಲಿ ಬಿಡುಗಡೆಯಾದ ಆರು ದಿನಗಳಲ್ಲಿ ‘ಹನುಮಾನ್’ ಚಿತ್ರ ರೂ. 21.02 ಕೋಟಿ ಸಂಗ್ರಹಿಸಿದೆ. ಬುಧವಾರ ಈ ಚಿತ್ರ ರೂ. 2.25 ಕೋಟಿ ಕಲೆಹಾಕಿದೆ. ಗುರುವಾರದ ಕಲೆಕ್ಷನ್ಸ್ ಕೂಡಿಸಿದರೆ… ಒಟ್ಟು 23 ಕೋಟಿ ಬಾಚಿಕೊಂಡಿದೆ.
ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಫ್’ ಭಾಗ 1 ಹಿಂದಿಯಲ್ಲಿ ಮೊದಲ ವಾರದಲ್ಲಿ 20 ಕೋಟಿಗಿಂತ ಕಡಿಮೆ ಕಲೆಕ್ಷನ್ ಮಾಡಿತ್ತು. ರಿಷಬ್ ಶೆಟ್ಟಿ ನಾಯಕನಾಗಿ ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಹಿಂದಿ ಡಬ್ಬಿಂಗ್ ಕಲೆಕ್ಷನ್ ನೋಡಿದರೆ… ‘ಹನುಮಾನ್’ ಮೊದಲ ವಾರದಲ್ಲೇ ಈ ಎರಡು ಸಿನಿಮಾಗಳ ದಾಖಲೆ ಮುರಿದಿದೆ. ಹಿಂದಿಗೆ ಡಬ್ ಆದ ದಕ್ಷಿಣ ಭಾರತದ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ‘ಬಾಹುಬಲಿ 2’, ‘ಕೆಜಿಐಎಫ್ 2’, ‘ಆರ್ಆರ್ಆರ್’, ‘2.0’, ‘ಸಾಲಾರ್’ ಸೇರಿವೆ. ‘, ‘ಸಾಹೋ’, ‘ಬಾಹುಬಲಿ 1’. ‘, ‘ಪುಷ್ಪ’, ‘ಕಾಂತಾರ’, ‘ಕೆಜೀಫ್’ ಸಿನಿಮಾಗಳು ಪ್ರಮುಖವು, ನಿಖಿಲ್ ಸಿದ್ಧಾರ್ಥ್ ಅಭಿನಯದ ‘ಕಾರ್ತಿಕೇಯ 2’ ಟಾಪ್ 11 ಸ್ಥಾನಗಳಲ್ಲಿದೆ. ಅದರ ನಂತರ ರಜನಿಕಾಂತ್, ವಿಜಯ್, ಪ್ರಭಾಸ್ ಮತ್ತು ವಿಕ್ರಮ್ ಅವರ ಚಿತ್ರಗಳಿವೆ.
ಸದ್ಯ ಟಾಪ್ 18 ಸ್ಥಾನದಲ್ಲಿ ತೇಜ ಸಜ್ಜಾ ‘ಹನುಮಾನ್’ ಸಿನಿಮಾ ಇದೆ. ಗಣರಾಜ್ಯೋತ್ಸವದವರೆಗೆ (ಜನವರಿ 26) ಹಿಂದಿಯಲ್ಲಿ ಯಾವುದೇ ದೊಡ್ಡ ಚಿತ್ರಗಳಿಲ್ಲ. ಇದರಿಂದಾಗಿ ಈ ಸಿನಿಮಾ ಬಾಲಿವುಡ್ನ 50 ಕೋಟಿ ಕ್ಲಬ್ ಸೇರುವ ಸಾಧ್ಯತೆ ಹೆಚ್ಚಿದೆ. ಈ ದಾಖಲೆ ನಿರ್ಮಿಸಿದರೆ, ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಡಬ್ಬಿಂಗ್ ಸಿನಿಮಾಗಳ ಟಾಪ್ 10 ಪಟ್ಟಿಗೆ ‘ಹನುಮಾನ್’ ಸೇರಲಿದೆ.