ನ್ಯೂಸ್ ನಾಟೌಟ್ : ಕಳೆದ 3 ವರ್ಷಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಹಾಲಿನ ವ್ಯಾನ್ ಚಾಲಕ ಸೂರ್ಯನಾಯಕ ಎಂಬಾತ ಈ ಕೃತ್ಯವೆಸಗಲು ಮುಂದಾಗಿದ್ದ. ಇದೀಗ ಆತನಿಗೆ ಮಡಿಕೇರಿ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು 3 ವರ್ಷ ಸಜೆ ಮತ್ತು ₹ 15 ಸಾವಿರ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.
2019ರ ಡಿಸೆಂಬರ್ 10ರಂದು ಶಾಲೆಗೆಂದು ತೋಟದ ಕಾಲು ದಾರಿಯಲ್ಲಿ ಬಾಲಕಿ ಹೋಗುತ್ತಿದ್ದಳು.ಈ ವೇಳೆ ಬಾಲಕಿಯ ಮೇಲೆ ಈತ ಅತ್ಯಾಚಾರಕ್ಕೆ ಯತ್ನಿಸಿದ್ದನೆಂದು ತಿಳಿದು ಬಂದಿದೆ.ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಈತನನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಎಚ್.ಸಿ.ಶಾಮ್ ಪ್ರಸಾದ್ ಶಿಕ್ಷೆ ವಿಧಿಸಿದರು.ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ರುದ್ರ ಪ್ರಸನ್ನ ವಾದ ಮಂಡಿಸಿದ್ದರು.