ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಅಧಿಕೃತವಾಗಿ ಮರಳುಗಾರಿಕೆ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಮರಳು ಸಾಗಾಟದಾರರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಸುಳ್ಯದಲ್ಲಿ ಕಳೆದ 9 ವರ್ಷಗಳಿಂದ ಅಧಿಕೃತವಾಗಿ ಮರಳುಗಾರಿಕೆ ಮಾಡಲು ಅವಕಾಶ ಮಾಡಿ ಕೊಟ್ಟಿಲ್ಲ, ಈಗಿನ ಸರಕಾರ ಅಕ್ರಮ ಮರಳು ಸಾಗಾಟದ ಹೆಸರಿನಲ್ಲಿ ವಾಹನದ ಮಾಲೀಕರು ಮತ್ತು ಡ್ರೈವರ್ ಮೇಲೆ ಕೇಸು ದಾಖಲಿಸಿ ಜೈಲಿಗೆ ಅಟ್ಟುವ ಕೆಲಸವನ್ನು ಮಾಡುತ್ತಿದೆ. ಸರಕಾರದ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳು ಹೊರಡಿಸಿದ ಈ ಆದೇಶವನ್ನು ಸುಳ್ಯದಲ್ಲಿ ಅಧಿಕೃತವಾಗಿ ಮರಳು ಸಾಗಾಟಕ್ಕೆ ಅನುಮತಿ ನೀಡುವ ವರೆಗೆ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಹೋರಾಟ ನಡೆಸುತ್ತೇವೆ ಎಂದು ಮರಳು ಸಾಗಾಟದಾರರು ಒತ್ತಾಯಿಸಿದ್ದಾರೆ.