ನ್ಯೂಸ್ ನಾಟೌಟ್: ಕೊಡಗಿನ ಕುವರಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳ ಆಫರ್ನಲ್ಲಿದ್ದಾರೆ.ಇಷ್ಟೆಲ್ಲಾ ಬ್ಯುಸಿ ಇದ್ದರೂ ಅಭಿಮಾನಿಗಳನ್ನು ಸಂಕ್ರಾಂತಿ ದಿನದಂದು ನೆನಪಿಸಿಕೊಂಡು ವಿಶ್ ಮಾಡಿದ್ದಾರೆ.
ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ.ಹೀಗಾಗಿ ಈ ಬಾರಿ ಯಾರಿಗೂ ಬೇಸರವಾಗದಂತೆ ಸಂಕ್ರಾಂತಿ ದಿನದಂದು ಒಟ್ಟು ಆರು ಭಾಷೆಯ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.ಹೌದು,ನಟಿ ರಶ್ಮಿಕಾ ಸಂಕ್ರಾಂತಿಯ ಶುಭಾಶಯಗಳನ್ನು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಆರು ಭಾಷೆಯಲ್ಲಿ ಅವರು ಸೋಷಿಯಲ್ ಮಿಡಿಯಾ ಮೂಲಕ ವಿಶ್ ಮಾಡಿದ್ದಾರೆ.
ರಶ್ಮಿಕಾ ಪೋಸ್ಟ್ ಹಾಕಿದ್ದೇ ತಡ ಪಟಪಟಾಂತ ಕ್ಷಣ ಮಾತ್ರದಲ್ಲೇ ಶೇರ್ ಆಗತೊಡಗಿದೆ. ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಫ್ಯಾನ್ಸ್ ಕಾಮೆಂಟ್ ವಿಭಾಗದಲ್ಲಿ ರಾಯಲ್ ಕ್ವೀನ್, ಕ್ರಶ್, ಕ್ವೀನ್ ಅಂತೆಲ್ಲಾ ಬರೆದರೇ, ಇನ್ನು ಕೆಲವರು ಸಂಕ್ರಾಂತಿಗೆ ಶುಭಾಶಯ ಹೇಳಿದ್ದಾರೆ.ನಟಿ ರಶ್ಮಿಕಾ ಒಂದು ಕಡೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಮತ್ತೊಂದು ಕಡೆ ಅವರ ಮದುವೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು,ಇವರು ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ಎಂಗೇಜ್ಮೆಂಟ್ ಮಾಡಿಕೊಳ್ತಿದ್ದಾರೆ ಎಂದು ಸುದ್ದಿ ಹರಡಿದೆ.
ರಶ್ಮಿಕಾ ಹಾಗೂ ವಿಜಯ್ ಜೋಡಿ ಡೇಟಿಂಗ್ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗುವುದರ ಜೊತೆಗೆ, ಇಬ್ಬರೂ ಜೊತೆಯಾಗಿರುವಾಗ ಸಾಕಷ್ಟು ಬಾರಿ ಪಾಪರಾಜಿಗಳ ಕಣ್ಣಿಗೆ ಒಟ್ಟಿಗೆ ತಗ್ಲಾಕೊಂಡಿದ್ದಾರೆ.ರಶ್ಮಿಕಾ ಹಾಗೂ ವಿಜಯ್ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡಿದ್ದರೂ, ಇದುವರೆಗೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತಗೊಳಿಸಿಲ್ಲ.