ನ್ಯೂಸ್ ನಾಟೌಟ್: ದೆಹಲಿ, ಉತ್ತರ ಭಾರತದ ಹಲವೆಡೆ ದಟ್ಟ ಮಂಜು ಹಿನ್ನೆಲೆ 100 ವಿಮಾನಗಳ ಹಾರಾಟ ಹಲವೆಡೆ ವಿಳಂಬವಾದೆ. ತೀವ್ರ ಚಳಿಯಿಂದಾಗಿ ಗೋಚರತೆ ಅಸ್ಪಷ್ಟವಾಗಿದ್ದಕ್ಕೆ, ವಿಮಾನ ಸಂಚಾರ ವಿಳಂಬದ ಬಗ್ಗೆ ಘೋಷಣೆ ಮಾಡುತ್ತಿದ್ದ ಕ್ಯಾಪ್ಟನ್ ಮೇಲೆ ಕೋಪಗೊಂಡ ಪ್ರಯಾಣಿಕ ಹಲ್ಲೆ ನಡೆಸಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಉತ್ತರ ಭಾರತದ ಹಲವೆಡೆ ಮಂಜಿನ ವಾತಾವರಣ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.ಇದರಿಂದಾಗಿ ಹಲವು ವಿಮಾನಗಳು ತಡವಾಗಿ ಸಂಚರಿಸುತ್ತಿದ್ದು, ಕೆಲವು ವಿಮಾನಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಇದುವರೆಗೆ 100 ವಿಮಾನಗಳು ವಿಳಂಬವಾಗಿದ್ದು, 10 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಸಂಜೆ 7 ಗಂಟೆಗೆ ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ (6E 2175) ಈ ಘಟನೆ ನಡೆದಿದ್ದು, ಪೈಲೆಟ್ ಘೋಷಣೆ ಮಾಡುತ್ತಿದ್ದಂತೆ ಕೋಪಗೊಂಡ ಪ್ರಯಾಣಿಕ ಪೈಲೆಟ್ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಫೈಲೆಟ್ ಮೇಲೆ ಹಲ್ಲೆ ನಡೆಸಿರುವ ಪ್ರಯಾಣಿಕನನ್ನು ಸಾಹಿಲ್ ಕತ್ರಿಯಾ ಎಂದು ಗುರುತಿಸಲಾಗಿದ್ದು, ಈತ ಪೈಲಟ್ ಅನೂಪ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಇಂಡಿಗೋ ವಿಮಾನದ ಸಹ ಪೈಲಟ್ ಅನುಪ್ ಕುಮಾರ್ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 323, 341, 290 ಮತ್ತು ಸೆಕ್ಷನ್ 22 ಏರ್ ಕ್ರಾಫ್ಟ್ ರೂಲ್ಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.