ನ್ಯೂಸ್ ನಾಟೌಟ್ :ಸುಳ್ಯದ ಮಂಡೆಕೋಲು ಎಂಬಲ್ಲಿ ಗ್ರಾಹಕರೊಬ್ಬರ ಮನೆಗೆ ಮಂಗಳೂರಿನ ಮೆಸ್ಕಾಂ ಜಾಗೃತದಳ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಬಗ್ಗೆ ವರದಿಯಾಗಿದೆ.ಕೃಷಿ ಕಾರ್ಯಗಳಿಗಾಗಿ ಸರಕಾರ ನೀಡುವ ಉಚಿತ ವಿದ್ಯುತ್ ಅನ್ನು ದುರ್ಬಳಕ್ಕೆ ಮಾಡಿರುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ನಡೆಸಿದ್ದಾರೆನ್ನುವ ಮಾಹಿತಿ ಲಭ್ಯವಾಗಿವೆ.
ಸರಕಾರ ಕೃಷಿ ಕಾರ್ಯಗಳಿಗಾಗಿ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡುತ್ತೆ.ಆದರೆ ಸುಳ್ಯದ ಮಂಡೆಕೋಲಿನ ಕೆ.ಬಿ.ಇಬ್ರಾಹಿಂ ಎಂಬುವವರು ಈ ಕೃಷಿ ಪಂಪ್ನಿಂದ ವಿದ್ಯುತ್ ಅನ್ನು ತಮ್ಮ ಮನೆ ಸೌಲಭ್ಯಕ್ಕೆ ಹಾಗೂ ಫರ್ನಿಚರ್ ತಯಾರಿ ಘಟಕಕ್ಕೆ ಬಳಸುತ್ತಿದ್ದರು ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ಮೆಸ್ಕಾಂ ಜಾಗೃತದಳದ ಎ.ಇ.ಇ. ಪ್ರವೀಣ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ.ಈ ಸಂದರ್ಭ ಅಕ್ರಮ ನಡೆಸಿರುವುದು ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ವೇಳೆ ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು, ಇಬ್ರಾಹಿಂ ಅವರ ಮೇಲೆ ಕೇಸು ದಾಖಲಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.