ನ್ಯೂಸ್ ನಾಟೌಟ್: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕೂಟದಲ್ಲಿ ಏನೆಕಲ್ಲು ಮಾದನ ಮನೆ ರಾಮಯ್ಯ ಮಿಂಚಿನ ಪ್ರದರ್ಶನ ನೀಡಿದ್ದಾರೆ.
800 ಮೀ. ಓಟದಲ್ಲಿ ಪ್ರಥಮ, 400 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ ಹಾಗೂ 4/100 ಮೀ. ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಫೆಬ್ರವರಿ 2 ರಿಂದ 4ರ ತನಕ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.