ನ್ಯೂಸ್ ನಾಟೌಟ್ :7ತಿಂಗಳ ಮಗು ನಿದ್ರೆ ಮಾಡಿತ್ತು.ಇಲ್ಲೆ ಹತ್ತಿರದಲ್ಲಿಯೇ ಸ್ವಲ್ಪ ಕೆಲಸವಿದೆಯೆಂದು ಮಗುವನ್ನು ನಿದ್ರಿಸಿ ತಾಯಿ ಕೆಲಸಕ್ಕೆ ಹೋಗಿಯೇ ಬಿಟ್ಟಿದ್ದಳು.ಇತ್ತ ಗಾಢವಾಗಿ ನಿದ್ದೆಗೆ ಜಾರಿದ್ದ ಮಗುವನ್ನು ನಾಯಿಗಳು ಬಂದು ಕಚ್ಚಿ ಎಳೆದಾಡಿ ಶಾಶ್ವತವಾಗಿ ಕಣ್ಣೇ ಮುಚ್ಚುವ ಹಾಗೆ ಮಾಡಿಬಿಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಿಂದ ವರದಿಯಾಗಿದೆ.
ಏಳು ತಿಂಗಳ ಗಂಡು ಮಗುವನ್ನು ಬೀದಿ ನಾಯಿಗಳ ಹಿಂಡು ಕಚ್ಚಿದೆ ಮಾತ್ರವಲ್ಲ ಮಗುವಿನ ಉಸಿರು ಚೆಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಯೋಧ್ಯಾ ನಗರ ಪ್ರದೇಶದಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದ್ದು , ಈ ಸಂಬಂಧ ಪೊಲೀಸರು ಮತ್ತು ಆಡಳಿತದ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಾಯಿಗಳ ದಾ*ಳಿ ದಿನವೇ ಮನೆಯವರು ಹೂತಿಟ್ಟಿದ್ದು, ಬಳಿಕ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಗುವಿನ ಪೋಷಕರು ದಿನಗೂಲಿ ಕೆಲಸ ಮಾಡುತ್ತಿದ್ದರು. ಅಯೋಧ್ಯಾ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ನಿಲ್ಹಾರೆ ಅವರು ಘಟನೆಗೆ ಮುನ್ನ ಮಗುವಿನ ತಾಯಿ ತನಗೆ ಹತ್ತಿರದಲ್ಲಿ ಸ್ವಲ್ಪ ಕೆಲಸವಿದೆ ಎಂದು ಮಗುವನ್ನು ನೆಲದ ಮೇಲೆ ಮಲಗಿಸಿದ್ದರು. ಹೀಗಾಗಿ ನಾಯಿಗಳ ದಂಡು ಮಗುವನ್ನು ಕಚ್ಚಿ ಎಳೆದೊಯ್ದಿದೆ ಎಂದು ಅವರು ಹೇಳಿದರು.ಅಕ್ಕಪಕ್ಕದ ಜನರು ಈ ಭೀಕರ ಘಟನೆಯನ್ನು ನೋಡಿ ಕೂಗಾಡಿದ್ದಾರೆ. ಆದರೆ ಅಷ್ಟರಲ್ಲಿ ನಾಯಿಗಳು ಮಗುವಿನ ಒಂದು ಕೈಯನ್ನು ಕಚ್ಚಿದ್ದವು. ಅಲ್ಲದೆ ಮಗುವಿನ ದೇಹವನ್ನು ಕಚ್ಚಿ ಎಳೆದಾಡಿದ್ದರಿಂದ ಮಗು ಸ್ಥಳದಲ್ಲೇ ದುರಂತ ಅಂತ್ಯವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲಾಡಳಿತವು ಬಾಲಕನ ಕುಟುಂಬಕ್ಕೆ 50,000 ರೂಪಾಯಿ ಆರ್ಥಿಕ ಸಹಾಯವನ್ನು ನೀಡಿದ್ದು, ಇನ್ನೂ 50,000 ರೂಪಾಯಿಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಯೋಧ್ಯಾ ನಗರ ಪ್ರದೇಶದಿಂದ ಎಂಟು ಬೀದಿ ನಾಯಿಗಳನ್ನು ಹಿಡಿದಿದೆ. ಅಲ್ಲದೆ ಬೀದಿ ನಾಯಿಗಳನ್ನು ಹಿಡಿಯುವ ಅಭಿಯಾನವನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ನಾಗರಿಕ ಸಂಸ್ಥೆಯನ್ನು ಕೋರಿದ್ದಾರೆ ಎಂದು ಅವರು ಹೇಳಿದರು.