ನ್ಯೂಸ್ ನಾಟೌಟ್ :ಇತಿಹಾಸ ಪ್ರಸಿದ್ಧ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜಾತ್ರೋತ್ಸವ ನಡಿತಿದೆ.ಈ ಸಂಭ್ರಮಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ಚೆನ್ನಕೇಶವ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ನಂಬಿದವರಿಗೆ ಇಂಬು ನೀಡುವ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಭಕ್ತಿ,ಸಂಭ್ರಮದಿಂದ ನಡೆಯುತ್ತಿದೆ.ಈ ಜಾತ್ರೆಯು ಹಲವು ವಿಶೆಷತೆಗಳಿಂದ ಕೂಡಿದ್ದು,ಊರ ,ಪರವೂರಿನ ಭಕ್ತರು ಇಲ್ಲಿ ಬಂದು ಈ ಉತ್ಸವದಲ್ಲಿ ಪಾಲ್ಗೊಂಡರು. ಜಾತ್ರೋತ್ಸವ ಅಂಗವಾಗಿ ಶ್ರೀ ಚೆನ್ನಕೇಶವ ದೇವರ ರಥೋತ್ಸವ ಅದ್ದೂರಿಯಿಂದ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದು,ರಥೋತ್ಸವ ನೋಡಿ ಕಣ್ತುಂಬಿಕೊಂಡರು.
ಈ ಸಂದರ್ಭ ರಾತ್ರಿ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ದೇವರ ಉತ್ಸವ ಬಲಿ ನಡೆಯಿತು.ಕಲ್ಕುಡ ದೈವಗಳ ಭಂಡಾರ ಬಂದ ಬಳಿಕ , ಕಲ್ಕುಡ ಮತ್ತು ರುದ್ರಚಾಮುಂಡಿ ದೈವಗಳ ನರ್ತನದೊಂದಿಗೆ ಭಕ್ತಿ, ಸಂಭ್ರಮಕ್ಕೆ ರಥೋತ್ಸವ ಸಾಕ್ಷಿಯಾಯಿತು.ಈ ವೇಳೆ ಭಕ್ತಾದಿಗಳು ದೇವರನ್ನು ಧ್ಯಾನಿಸುತ್ತಾ ಹೆಜ್ಜೆ ಹಾಕಿದರು.ಇದರೊಂದಿಗೆ ದೇವರನ್ನು ವಿಶೇಷವಾಗಿ ಹೂಗಳಿಂದ ಶೃಂಗರಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಡಾ.ಹರಪ್ರಸಾದ ತುದಿಯಡ್ಕ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ,ಸಮಿತಿ ಸದಸ್ಯರು ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ಇನ್ನು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಇಂದು(ಜ.೧೨) ಮಧ್ಯಾಹ್ನ ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ಕೂಡ ನಡೆಯಲಿದೆ.