ನ್ಯೂಸ್ ನಾಟೌಟ್: ಉದ್ಯಾನನಗರಿ ಕಂಠೀರವ ಕ್ರೀಡಾಂಗಣದಲ್ಲಿ ಜ.5 ರಿಂದ 8 ರ ವರೆಗೆ ಅಂಚೆ ಇಲಾಖೆ ನಡೆಸಿದ 13ನೇ ರಾಜ್ಯಮಟ್ಟದ ಕರ್ನಾಪೆಕ್ಸ್–2024 ರ ಚಿತ್ರಕಲಾ ಸ್ಪರ್ಧೆಯಲ್ಲಿ ಪುತ್ತೂರಿನ ಪುಟಾಣಿ ತನಯ ಮಿಂಚಿದ್ದಾರೆ.
ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಆಗಿರುವ ತನಯ ಅಂಚೆ ಇಲಾಖೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಭಾರತದ ಸರ್ವಶ್ರೇಷ್ಠ ಹಾಕಿ ತಾರೆ ಕೊಡಗಿನ ಎಂ ಪಿ ಗಣೇಶ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ತನಯ ಬಹುಮಾನ ಸ್ವೀಕರಿಸಿದರು. ತನಯ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಪ್ರಫುಲ್ಲ ಹಾಗೂ ಗಣೇಶ್ ಅವರ ಸುಪುತ್ರಿ ಆಗಿರುತ್ತಾರೆ. ಈಕೆ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಆರ್ಟ್ ಅಂಡ್ ಕ್ರಾಫ್ಟ್ ತರಬೇತುದಾರರಿಂದ ತರಬೇತಿ ಪಡೆದುಕೊಂಡಿದ್ದಾರೆ.