ನ್ಯೂಸ್ ನಾಟೌಟ್: ರಾಮಮಂದಿರ ಉದ್ಘಾಟನೆಯ ಪ್ರಯುಕ್ತ ಅಳವಡಿಸಿದ್ದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಬಿಜೆಪಿ ನೇತೃತ್ವದಲ್ಲಿ ಸುಳ್ಯದ ಆರೋಪಿ ಪತ್ತೆಹಚ್ಚುವಲ್ಲಿ ಪೊಲೀಸರು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಳ್ಯದ ಮುಖ್ಯರಸ್ತೆಯಲ್ಲಿ ಜ.7 ರಂದು ಪ್ರತಿಭಟನೆ ನಡೆಸಲಾಯಿತು.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ.ಹೀಗಾಗಿ ಇಡೀ ದೇಶದಾದ್ಯಂತ ಕೋಟ್ಯಂತರ ಜನ ಈ ಒಂದು ಸಂಭ್ರಮದ ಕ್ಷಣಕ್ಕೆ ಕಾಯುತ್ತಿದ್ದಾರೆ.ಇದಕ್ಕಾಗಿ ಸಕಲ ಸಿದ್ಧತೆಗಳು ನಡಿತಿದ್ದು,ಆಮಂತ್ರಣ ಪತ್ರಿಕೆಯನ್ನೂ ಕೂಡ ಹಂಚಲಾಗುತ್ತಿದೆ.ಅಲ್ಲಲ್ಲಿ ಶ್ರೀ ರಾಮನ ಭಕ್ತರು ಕಟೌಟ್ , ಬ್ಯಾನರ್ ಅಳವಡಿಸಿ ಈ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದಾರೆ.ಇದೀಗ ಸುಳ್ಯದಲ್ಲಿ ಅಳವಡಿಸಲಾದ ಬ್ಯಾನರನ್ನು ಯಾರೋ ಕಿಡಿಕೇಡಿಗಳು ಹರಿದು ಹಾಕಿರುವ ಘಟನೆ ಕುರಿತು ವರದಿಯಾಗಿತ್ತು.
ಬಿ ಎಮ್ ಎಸ್ ಆಟೋ ಚಾಲಕರ ಸಂಘ ದಿಂದ ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿ ಅಳವಡಿಸಲಾಗಿದ್ದ ರಾಮ ಮಂದಿರ ಲೋಕಾರ್ಪಣೆಯ ಕುರಿತ ಬ್ಯಾನರ್ ಕಿಡಿಗೇಡಿಗಳಿಂದ ಹಾನಿ ಮಾಡಲಾಗಿತ್ತು.
ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ ಹಾಗೂ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಪ್ರಯುಕ್ತ ಬ್ಯಾನರ್ ಅಳವಡಿಸಲಾಗಿತ್ತು.ಆದರೆ ಶ್ರೀರಾಮ ದೇವರು ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯದ ಬ್ಯಾನರ್ ನ್ನು ರಾತ್ರಿ ವೇಳೆ ಯಾರೋ ಹರಿದ ಹಾಕಿರುವ ಕುರಿತು ವರದಿಯಾಗಿತ್ತು.
ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಲು ಸಂಘಟನೆಗಳು 24 ಗಂಟೆಗಳ ಗಡುವು ನೀಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ತಡ ಮಾಡುತ್ತಿದೆ ಎಂದು ಆರೋಪಿಸಿ ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಹರೀಶ್ ಕಂಜಿಪಿಲಿ, ವಿನಯ್ ಕುಮಾರ್ ಕಂದಡ್ಕ, ಜಿ ಜಿ ನಾಯಕ್, ಭಜರಂಗ ದಳ ಸಂಚಾಲಕರು ಲತೀಶ್ ಗುಂಡ್ಯ, ಚಣಿಯ ಕಳ್ತಡ್ಕ, ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.