ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣಗಳು ಬಂದ ಮೇಲಂತು ಕುಣಿತಕ್ಕೇನು ಬರವಿಲ್ಲ.ಕಂಡ ಕಂಡಲ್ಲಿ ಸೊಂಟ ಬಳುಕಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡೋರ ಸಂಖ್ಯೆ ಹೆಚ್ಚಾಗ್ಬಿಟ್ಟಿದೆ.ಈ ಗೀಳು ಎಷ್ಟರ ಮಟ್ಟಿಗೆ ಇದೆಯೆಂದ್ರೆ ತಾವು ಎಲ್ಲಿದ್ದೇವೆ ಅನ್ನೋದನ್ನು ಮೈ ಮರೆತು ಕುಣಿದು ಕುಪ್ಪಳಿಸಿ ಮಜಾ ಮಾಡುತ್ತಾರೆ.ಇದೀಗ ಇಲ್ಲೊಬ್ಬಳು ಯುವತಿ ಅಸಭ್ಯವಾಗಿ ಡ್ಯಾನ್ಸ್ ಮಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.ಭೋಜ್ಪುರ ಪ್ರದೇಶದ ಗಾಜಿಯಾಬಾದ್ನ ಮೋದಿನಗರ ಪ್ರದೇಶದಲ್ಲಿ ನಡೆದ ಬಿಜೆಪಿಯ ʼವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ವೇದಿಕೆಯಲ್ಲಿ ಅಸಭ್ಯ ನೃತ್ಯದ ಪ್ರದರ್ಶನ ಆಗಿದೆ ಎನ್ನಲಾಗಿದೆ.
ಈ ಕಾರ್ಯಕ್ರಮಕ್ಕೆ ನೂರಾರು ಮಂದಿ ಸೇರಿದ್ದರು. ಈ ವೇಳೆಗಾಗಲೇ ಈ ಯುವತಿ ನೃತ್ಯ ಮಾಡಲಾರಂಭಿಸಿದ್ದಾಳೆ.ಇದನ್ನು ಯಾರೋ ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಗಾಜಿಯಾಬಾದ್ನ ಭೋಜ್ಪುರದ ಶಕುರ್ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಖ್ಯಸ್ಥ ಮತ್ತು ಅವರ ಪತ್ನಿ, ಸ್ಥಳೀಯ ಶಾಸಕ ಮತ್ತು ಸಂಸದ ಸತ್ಯಪಾಲ್ ಸಿಂಗ್ ವೇದಿಕೆಯಲ್ಲಿದ್ದರು.
ಶಾಸಕ, ಸಂಸದ ಹಾಗೂ ಅತಿಥಿಗಳ ಸಮ್ಮುಖದಲ್ಲೇ ಈ ರೀತಿಯ ಅಸಭ್ಯ ನೃತ್ಯ ಪ್ರದರ್ಶನ ಮಾಡಿದ್ದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ವೇದಿಕೆಯಲ್ಲಿ ಅತಿಥಿಗಳು ಇದ್ದಾಗ ಈ ನೃತ್ಯ ಆಗಿಲ್ಲ ಎಂದು ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದಾರೆ.ಕಾರ್ಯಕ್ರಮ ಸರಿಯಾದ ಪ್ರೋಟೋಕಾಲ್ಗಳೊಂದಿಗೆ ನಡೆದಿದೆ. ಅತಿಥಿಗಳು ಹೋದ ನಂತರವೇ ನೃತ್ಯ ಪ್ರದರ್ಶನ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.