ನ್ಯೂಸ್ ನಾಟೌಟ್: ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ 2023-24 ನೇ ಸಾಲಿನ ಸೇವಾ ಯೋಜನೆಯಡಿಯಲ್ಲಿ ಜ.13ಕ್ಕೆ ರೋಟರಿ ಸಮುದಾಯ ಭವನದ ಮೇಲ್ಚಾವಣಿ ಉದ್ಘಾಟನೆ ನಡೆಯಲಿದೆ ಎಂದು ಸಹಕಾರ ರತ್ನ ಸೀತಾರಾಮ ರೈ ಸವಣೂರು ಹೇಳಿಕೆ ನೀಡಿದ್ದಾರೆ.
ಜ.4 ಗುರುವಾರ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು, “ರೋಟರಿ ಸಮುದಾಯ ಭವನದ ಮೇಲ್ಛಾವಣಿ ಮತ್ತು ಸಭಾಭವನದ ಉದ್ಘಾಟನೆ ನಡೆಯಲಿದೆ. ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್.ಕೇಶವ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ ಯೋಜನೆಯಡಿ ಸುಳ್ಯ ಆಸುಪಾಸಿನ 10 ಅಂಗನವಾಡಿ ಕೇಂದ್ರಗಳಿಗೆ ಚಪ್ಪಲ್ ಸ್ಟ್ಯಾಂಡ್ ವಿತರಣೆ ನಡೆಯುವುದು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಶಾಸಕಿ ಭಾಗೀರಥಿ ಮುರುಳ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಗಿರಿಜಾಶಂಕರ್ ತುದಿಯಡ್ಕ ಭಾಗವಹಿಸಲಿದ್ದಾರೆ. ರೋಟರಿ ಕ್ಲಬ್ ಸುಳ್ಯ ಸಿ.ಟಿ. ಹಾಗೂ ಇನ್ನರ್ ವ್ಹೀಲ್ ಕ್ಲಬ್ ನವರು ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯುವುದು ಎಂದವರು ವಿವರ ನೀಡಿದರು. ಅದೇ ದಿನ ಸಂಜೆ ಸವಣೂರಿನಲ್ಲಿ ಸ್ನೇಹ ರಶ್ಮಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ಗಿರಿಜಾಶಂಕರ್ ತುದಿಯಡ್ಕ, ಕಾರ್ಯದರ್ಶಿ ರೊ.ಕಸ್ತೂರಿ ಶಂಕರ್, ಯೋಜನಾ ಸಮಿತಿ ಕಾರ್ಯದರ್ಶಿ ಹರಿರಾಯ ಕಾಮತ್, ಜೊತೆ ಕಾರ್ಯದರ್ಶಿ ಸನತ್ ಪಿ.ಆರ್., ಖಜಾಂಚಿ ಪ್ರಭಾಕರನ್ ನಾಯರ್, ರೋಟರಿ ಸಮುದಾಯ ಸೇವೆ ನಿರ್ದೇಶಕ ಬಾಲಕೃಷ್ಣ ಎಸ್.ಬಿ. ಲ್ಯಾಬ್, ಬಾಪೂ ಸಾಹೇಬ್, ರೋಟರಿ ಸುಳ್ಯ ನಿಯೋಜಿತ ಅಧ್ಯಕ್ಷೆ ಯೋಗೀತಾ ಗೋಪಿನಾಥ್, ಡಾ.ಪುರುಷೋತ್ತಮ ಕೆ.ಜಿ., ಜೆ.ಕೆ.ರೈ ಉಪಸ್ಥಿತರಿದ್ದರು.