ನ್ಯೂಸ್ ನಾಟೌಟ್ : ಮೋದಿ ಜನಪ್ರಿಯ ನಾಯಕ ,ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರೇ ವಿನ್ ಆಗೋದು ಎಂಬುದರ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡಿತಾನೇ ಇದೆ.ಇದರ ಮಧ್ಯೆ ಅವರು ಕಾಲಿಟ್ಟಲ್ಲಿ ಶುಭವಾಗುತ್ತದೆ ಎಂದು ಅವರ ಅಭಿಮಾನಿಗಳು ಅವರನ್ನು ಕೊಂಡಾಡುತ್ತಿದ್ದಾರೆ.
ಇದೀಗ ಅದಕ್ಕೆ ಪೂರಕ ಎನ್ನುವ ಹಾಗೆ ಹುಲಿ ರಕ್ಷಿತಾರಣ್ಯದ 50ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಫಾರಿ ನಡೆಸಿ ಹೋಗಿದ್ದರು. ಅಲ್ಲಿಂದ ಬಂಡೀಪುರದ (Bandipur Tiger Reserve) ಚಾರ್ಮ್ ಸಂಪೂರ್ಣ ಬದಲಾಗಿ ಹೋಗಿದೆ. ಸಫಾರಿಗೆ ಆಗಮಿಸುವರ ಸಂಖ್ಯೆಯೂ ಹೆಚ್ಚಿದ್ದು,ಆದಾಯವೂ ಹಿಂದಿಗಿಂತಲೂ ಡಬಲ್ ಆಗ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಹುಲಿಗಳ ನಾಡು ಎಂದೇ ಖ್ಯಾತಿಯಾಗಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ ದೇಶದ ಪ್ರಧಾನಿ ಮೋದಿ ಒಂದೂವರೆ ತಾಸು ಸಫಾರಿ ನಡೆಸಿ ಹೋಗಿದ್ದರು. ಅವರು ಸಫಾರಿ ನಡೆಸಿ ಹೋದ ಬಳಿಕ ಬಂಡೀಪುರದ ಚಿತ್ರಣವೇ ಬದಲಾಗಿದೆ. ದೇಶದ ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದಲೂ ವನ್ಯ ಪ್ರಾಣಿ ವೀಕ್ಷಣೆಗೆ ಹಾಗೂ ಬಂಡೀಪುರದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಇದರಿಂದ ಬಂಡೀಪುರ ಆದಾಯದಲ್ಲಿ ಕೂಡ ರಾಜ್ಯದಲ್ಲಿ ನಂಬರ್ ಓನ್ ಆಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ನಾಗರಹೊಳೆ, ಬಂಡೀಪುರ, ಭದ್ರಾ, ಬಿಆರ್ಟಿ, ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಸಫಾರಿ ಸೌಲಭ್ಯ ಇದ್ದು ಎಲ್ಲಾ ಸಫಾರಿ ಕೇಂದ್ರಗಳಿಗಿಂತ ಬಂಡೀಪುರಕ್ಕೆ ಅತಿ ಹೆಚ್ಚಿನ ಪ್ರವಾಸಿಗರು ಈ ವರ್ಷ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಬಂಡೀಪುರಕ್ಕೆ ಪ್ರತಿ ವರ್ಷ 8 ಕೋಟಿ ರೂಪಾಯಿಯಷ್ಟು ಆದಾಯ ಹರಿದು ಬರುತ್ತಿತ್ತು. ಆದ್ರೆ ಈ ವರ್ಷ ಪ್ರಧಾನಿ ಮೋದಿ ಸಫಾರಿ ಬಳಿಕ ಆದಾಯ ಡಬಲ್ ಆಗಿದೆ. ಈ ವರ್ಷ 15 ಕೋಟಿ ರೂಪಾಯಿ ಆದಾಯ ನಿರೀಕ್ಷೆಯಿದ್ದು, ಈಗಾಗಲೇ 12 ಕೋಟಿಯಷ್ಟು ಆದಾಯ ಬಂದಿದೆ.ಇನ್ನೂ ಮೂರು ತಿಂಗಳ ಅವಧಿಯಲ್ಲಿ ಮೂರು ಕೋಟಿ ಆದಾಯ ಬರುತ್ತೆ ಅಂತಾರೆ ಅಧಿಕಾರಿಗಳು. ವರಮಾನದಲ್ಲಿ ರಾಜ್ಯದ ಎಲ್ಲಾ ಸಫಾರಿ ಕೇಂದ್ರಗಳಿಗೆ ಹೋಲಿಕೆ ಮಾಡಿದ್ರೆ ಬಂಡೀಪುರವೇ ನಂಬರ್ ಓನ್ ಆಗಿದೆ.