ನ್ಯೂಸ್ ನಾಟೌಟ್ :ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ.ಎಲ್ಲಾ ರೀತಿಯ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಈ ಒಂದು ಕ್ಷಣವೇ ಇಡೀ ದೇಶವೇ ಕಾಯುತ್ತಿದೆ.ಇದೀಗ ಆಮಂತ್ರಣ ಪತ್ರಿಕೆ ಕೂಡ ಹಂಚಿಕೆಯಾಗುತ್ತಿದ್ದು, ನಿರ್ಮಾಣಕ್ಕೆ ಕಾರಣರಾದ ಅಡ್ವಾಣಿ ಅವರಿಗೆ ಉದ್ಘಾಟನೆಗೆ ಅಹ್ವಾನ ನೀಡಿಲ್ಲ ಎನ್ನುವ ಅಪಸ್ವರ ಎದ್ದಿದೆ.
ಅಡ್ವಾಣಿ ಅವರು ಬರದಾರದು ಅಂದರೆ ಬಿಜೆಪಿ ಅವರಿಗೆ ಎಲ್ಲಿ ನೈತಿಕತೆ ಇದೆ? ಇನ್ನೂ ನಾವು ಯಾವ ಲೆಕ್ಕ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ಅದಕ್ಕೆ ಬಣ್ಣ ಕಟ್ಟಿ ರಾಜಕೀಯ ಮಾಡುತ್ತಿದ್ದಾರೆ. ರಾಮಮಂದಿರ ಆಗೋದಕ್ಕೆ ಅಡ್ವಾಣಿ ಅವರೇ ಕಾರಣ.ಅವರು ಸವಾಲುಗಳನ್ನು ಮೆಟ್ಟಿ ನಿಂತು ಬೆಳೆದವರು.ಬಿಜೆಪಿಯವರು ಹಿಂದೂ ಹಿಂದೂ ಎನ್ನುತ್ತಾರೆ .. ಆದರೆ ಅಧಿಕಾರ ಬಂದ ಮೇಲೆ ನಾವು ಮುಂದು, ನೀವು ಹಿಂದೆ ಅಂತಾರೆ. ಅಡ್ವಾಣಿ ಅವರನ್ನೇ ಬರಬೇಡಿ ಅಂದರೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ಕೊಡದೇ ಇರುವ ವಿಷಯ ದೊಡ್ಡದಲ್ಲ ಎಂದು ಕಾಲೆಳೆದಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಸಿಎಂ, ಸಚಿವರಿಗೆ ಆಹ್ವಾನ ನೀಡದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮಮಂದಿರಕ್ಕೆ ಹಣ ಸಂಗ್ರಹ ಮಾಡುವಾಗ ಎಲ್ಲರೂ ನೆನಪಾದ್ರು.ರಾಮಮಂದಿರ ರೆಡಿ ಆದ ಮೇಲೆ ಯಾರ ನೆನಪು ಅವರಿಗೆ ಬರಲ್ಲ. ನಾನು ಕೂಡಾ ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಕೊಟ್ಟಿದ್ದೇನೆ. ಸ್ಥಳೀಯ RSS ನಾಯಕರು ಹಣ ತೆಗೆದುಕೊಂಡು ಹೋಗಿದ್ದರು. ಆದರೆ ಈಗ ಯಾವುದಕ್ಕೂ ಆಹ್ವಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಬಿಜೆಪಿಯಲ್ಲಿ ಇತ್ತೀಚೆಗೆ ಒನ್ ಮ್ಯಾನ್ ಆರ್ಮಿ ರೀತಿ ಆಗಿದೆ, ನಮಗೆ ಯಾವುದಕ್ಕೂ ಆಹ್ವಾನ ನೀಡಿಲ್ಲ ಎಂದು ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡದ್ದಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.