ನ್ಯೂಸ್ ನಾಟೌಟ್: ನಿಂತಿದ್ದ ಬಾಲಕನಿಗೆ ಪಿಕಪ್ ಜೀಪ್ ವೊಂದು ಗುದ್ದಿರುವ ದುರ್ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಜನವರಿ 1ರಂದು ಸುಳ್ಯ ತಾಲೂಕಿನ ದರ್ಖಾಸಿನ ಸರ್ಕಾರಿ ಶಾಲೆ ಬಳಿ ಉಮ್ಮರ್ ಎಂಬುವವರು ಚಲಾಯಿಸುತ್ತಿದ್ದ ಪಿಕಪ್ ಏಕಾಏಕಿ ಬಂದು ನಿಶಾಂತ್ ಎಂಬ ನಿಂತಿದ್ದ ಬಾಲಕನಿಗೆ ಗುದ್ದಿದೆ. ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಅಪಘಾತ ಸಂಭವಿಸಿದೆ. ರಸ್ತೆಗೆ ಬಿದ್ದ ಬಾಲಕನಿಗೆ ಗಾಯಗಳಾಗಿದೆ. ತಕ್ಷಣ ಆತನನ್ನು ಸ್ಥಳೀಯರು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಬಾಳಿಲ ಗ್ರಾಮ, ಸುಳ್ಯ ನಿವಾಸಿ ಆನಂದ (45) ಎಂಬವರ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ :02/2024 ಕಲಂ : 279,337 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- +91 73497 60202
- [email protected]
- December 5, 2024 7:37 AM