ನ್ಯೂಸ್ ನಾಟೌಟ್: ಗುಲಾಮಗಿರಿ ಮಸೀದಿ ಒಡೆದು ರಾಮಮಂದಿರ ಕಟ್ಟಿದ್ದೇವೆ. ಮಥುರಾದಲ್ಲೂ ಶ್ರೀಕೃಷ್ಣನ ದೇವಸ್ಥಾನ ಕಟ್ಟೇ ಕಟ್ಟುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ (Shivamogga) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮಮಂದಿರ ಧ್ವಂಸ ಮಾಡಿದ್ದರು. ಬಾಬರ್ ಮಸೀದಿ ಕಟ್ಟಿದ್ದರು. ಈಗ ಗುಲಾಮಗಿರಿಯ ಮಸೀದಿ ಹೊಡೆದು ರಾಮಮಂದಿರ ಕಟ್ಟಿದ್ದೇವೆ. ನಮ್ಮೆಲ್ಲರ ಸೌಭಾಗ್ಯ, ನಾವು ಬದುಕಿರುವ ದಿನದಲ್ಲೇ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಆಗ್ತಿದೆ ಎಂದು ಹೇಳಿದ್ದಾರೆ.
ಗುಲಾಮಗಿರಿ ಸಂಕೇತ ಹೋಗಿ ಸ್ವಾಭಿಮಾನ ಸಂಕೇತ ನಿರ್ಮಾಣ ಆಗಿದೆ. ಮನೆ ಮನೆಗೆ ಮಂತ್ರಾಕ್ಷತೆ ಕೊಡ್ತಿದ್ದೇವೆ. ಜ.22 ರಂದು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಸಿಹಿ ತಯಾರಿಸಿ ಊಟ ಮಾಡಿ. ದೀಪಾವಳಿ ಹಬ್ಬದ ರೀತಿ ಆಚರಣೆ ಮಾಡಿ ಎಂದಿದ್ದಾರೆ.
ಪವಿತ್ರವಾದ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ರಾಜಕಾರಣ ಮಾತನಾಡಲ್ಲ. ಪ್ರಭು ಶ್ರೀರಾಮಚಂದ್ರನ ಭಕ್ತರು ಯಾರು ಇದ್ದಾರೋ, ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ‘ಬಿಜೆಪಿಯ ರಾಮ’ ಎನ್ನುವವರಿಗೆ ಕೇಂದ್ರದ ನಾಯಕರು ಆಹ್ವಾನ ಕೊಟ್ಟಿಲ್ಲ. ರಾಮನ ಬಗ್ಗೆ ಯಾರಿಗೆ ಗೌರವ ಇದೆ, ಅಭಿಮಾನ ಇದೆ ಎಲ್ಲರೂ ಬರಬಹುದು ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಎನ್ನುವ ತೀರ್ಮಾನ ಆಗುತ್ತಿದ್ದಂತೆ, ಕಾಶಿ ಮಥುರಾದಲ್ಲಿ ಸರ್ವೇಗೆ ಆದೇಶ ಆಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. ಕಾಶಿಯಲ್ಲೂ ಮಸೀದಿ ಒಡೆದುಹಾಕಿ ಕಾಶಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲೂ ಶ್ರೀಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.