ನ್ಯೂಸ್ ನಾಟೌಟ್: ಚುನಾವಣಾ ವರ್ಷ ಸಮೀಪಿಸುತ್ತಿದ್ದಂತೆ ಜನರಿಗೆ ಸರ್ಕಾರ ಹಲವು ರೀತಿಯಿಂದ ಕೊಡುಗೆಗಳನ್ನು ನೀಡುವುದು ಸಹಜವಾಗಿದೆ. ಇದರ ಭಾಗವಾಗಿಯೇ ಪೆಟ್ರೋಲ್, ಡಿಸೆಲ್ ದರವೂ ಇಳಿಕೆಯಾಗಲಿದೆ ಎನ್ನಲಾಗಿತ್ತು. ಇದೀಗ ವರ್ಷದ ಮೊದಲ ದಿನವೇ ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿವೆ ಎನ್ನಲಾಗಿದೆ. ಹೊಸ ದರ ಇಂದಿನಿಂದಲೇ(ಜ.1)ಜಾರಿಗೆ ಬರಲಿದೆ.
19 ಕೆಜಿ ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆ(price)ಯನ್ನು ಭಾಗಶಃ ಕಡಿಮೆ ಮಾಡಲಾಗಿದೆ. ಹೊಸ ವರ್ಷದ ಮೊದಲ ದಿನ ಕಂಪನಿಗಳು ಪ್ರತಿ ಸಿಲಿಂಡರ್ ಮೇಲೆ 1.50 ರೂ. ಕಡಿತವನ್ನು ಘೋಷಿಸಿದೆ. ಹೊಸ ಬೆಲೆಗಳು ಇಂದಿನಿಂದ ಅಂದರೆ 2024 ರ ಹೊಸ ವರ್ಷದ ಮೊದಲ ದಿನದಿಂದಲೇ ಅನ್ವಯವಾಗುತ್ತವೆ.
ಅಂದಹಾಗೆ, ಅಡುಗೆ ಅನಿಲದ ಸಿಲಿಂಡರ್ನ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಡುಗೆ ಅನಿಲದ ಸಿಲಿಂಡರ್ ಹಳೆಯ ದರದಲ್ಲಿಯೇ ದೊರೆಯಲಿದೆ ಎಂದು ವರದಿ ತಿಳಿಸಿದೆ.
ಹೊಸ ವರ್ಷದ ಸಂದರ್ಭದಲ್ಲಿ ವಿಮಾನ ಇಂಧನದ ಬೆಲೆಯನ್ನು ಇಳಿಸಿವೆ. ಪ್ರತಿ ಕಿಲೋ ಲೀಟರ್ಗೆ ಸುಮಾರು 4162.50 ರೂ.ಗಳಷ್ಟು ಇಳಿಕೆಯಾಗಿದೆ. ಸತತ ಮೂರನೇ ಕಡಿತದೊಂದಿಗೆ ವಿಮಾನ ದರಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.