ನ್ಯೂಸ್ ನಾಟೌಟ್ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ (ಡಿಸೆಂಬರ್ 30) ಅಯೋಧ್ಯೆ ವಿಮಾನ ನಿಲ್ದಾಣ ಲೋಕಾರ್ಪಣೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ ಈ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆಯಿತು.
ಮೋದಿ ಉದ್ಘಾಟನೆಯ ಬಳಿಕ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿ ಉಜ್ವಲ ಜೋಜನೆಯಲ್ಲಿ ಮತ್ತು ಹಲವು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಲೋಕಾರ್ಪಣೆಗೂ ಮೊದಲು ರೋಡ್ ಶೋ ಕೈಗೊಂಡಿದ್ದರು. ಇದೇ ವೇಳೆ, ಬಾಬರಿ ಮಸೀದಿ ಪರ ಹೋರಾಡಿದ, ಕೋರ್ಟ್ನಲ್ಲಿ ಅರ್ಜಿ ಹಾಕಿದ್ದ ಇಕ್ಬಾಲ್ ಅನ್ಸಾರಿ (Iqbal Ansari) ಕೂಡ ನರೇಂದ್ರ ಮೋದಿ ಮೇಲೆ ಹೂಚೆಲ್ಲಿ ಸ್ವಾಗತಿಸಿದ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಅಯೋಧ್ಯೆ ವಿಮಾನ ನಿಲ್ದಾಣ, ಅಮೃತ ಭಾರತ ರೈಲುಗಳಿಗೆ ಚಾಲನೆ ಸೇರಿ ಹಲವು ಕಾರ್ಯಕ್ರಮಗಳು ಇರುವ ಕಾರಣ ನರೇಂದ್ರ ಮೋದಿ ಅವರು ಶನಿವಾರ ಅಯೋಧ್ಯೆಗೆ ಆಗಮಿಸಿದರು. ಇದೇ ವೇಳೆ ಅವರು ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗಿನ 15 ಕಿಲೋಮೀಟರ್ ಉದ್ದಕ್ಕೂ ರೋಡ್ ಶೋ ನಡೆಸಿದರು. ಮಾರ್ಗದ ಬದಿ ನಿಂತಿದ್ದ ಸಾವಿರಾರು ಜನ ಮೋದಿ ಅವರ ಮೇಲೆ ಹೂಗಳನ್ನು ಚೆಲ್ಲುವ ಮೂಲಕ ಅಭಿಮಾನ ಮೆರೆದರು. ಮೋದಿ ಅವರ ರೋಡ್ ಶೋ ಧರ್ಮ ಪಥ, ಲತಾ ಮಂಗೇಶ್ಕರ್ ಚೌಕ್, ರಾಮ ಪಥ ಹಾಗೂ ತೇಢಿ ಬಜಾರ್ ಮೂಲಕ ಸಾಗಿತು.
ಇದೇ ವೇಳೆ ಬಾಬರಿ ಮಸೀದಿ ಪರ ಹೋರಾಟಗಾರ, ಮಾಜಿ ಅರ್ಜಿದಾರರೂ ಆದ ಇಕ್ಬಾಲ್ ಅನ್ಸಾರಿ ಅವರು ರಸ್ತೆಯ ಇಕ್ಕೆಲಗಳ ಮಧ್ಯೆ ನಿಂತು ಮೋದಿ ಅವರ ಮೇಲೆ ಹೂಗಳನ್ನು ಚೆಲ್ಲಿದರು.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ಬಳಿಕ ಮುಸ್ಲಿಮರ ನಡೆಸಿದ ಹೋರಾಟದಲ್ಲಿ ಇಕ್ಬಾಲ್ ಅನ್ಸಾರಿ ಭಾಗಿಯಾಗಿದ್ದರು. ಅಲ್ಲದೆ, ಬಾಬರಿ ಮಸೀದಿ ನೆಲಸಮ ಪ್ರಶ್ನಿಸಿ ಇವರು ಕೂಡ ಕೋರ್ಟ್ಗೆ ಅರ್ಜಿ ಸಲ್ಲಸಿದ್ದರು ಎನ್ನಲಾಗಿದೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/