ನ್ಯೂಸ್ ನಾಟೌಟ್ : ಮೊಬೈಲ್ನಲ್ಲಿ (Mobile) ಮಾತನಾಡುತ್ತಿದ್ದ ವೇಳೆ ಗಲಾಟೆ ಮಾಡಿದ ಎಂದು ಎರಡು ವರ್ಷದ ಮುಗ್ಧ ಮಗುವನ್ನು ಹೆತ್ತ ತಾಯಿಯೇ ಕತ್ತು ಹಿಸುಕಿ ಸಾಯಿಸಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ಜಾರ್ಖಂಡ್ನ (Jharkhand) ಬೆಂಗಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ಈ ಸಂಬಂಧ ಮೃತ ಮಗುವಿನ ತಾತ ರೋಜನ್ ಅಲಿಯಾಸ್ ಜಬ್ಬಾರ್ ಅನ್ಸಾರಿ ನೀಡಿದ ದೂರಿನ ಮೇರೆಗೆ ಕರಣ ದಾಖಲಿಸಲಾಗಿದೆ. ಸೊಸೆ ತನ್ನ ಮೊಮ್ಮಗ ಹಆಸಿಫ್ ಅನ್ಸಾರಿಯನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಮಾವ ಆರೋಪಿಸಿದ್ದಾರೆ. ವಿಚಾರಣೆ ವೇಳೆ ನಿರ್ದಯ ತಾಯಿ ಪೊಲೀಸರ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಫ್ಸಾನಾಗೆ ಎರಡು ಗಂಡು ಮಕ್ಕಳಿದ್ದು, ಒಬ್ಬನಿಗೆ ನಾಲ್ಕು ವರ್ಷ ಮತ್ತು ಇನ್ನೊಬ್ಬನಿಗೆ ಎರಡು ವರ್ಷ. ಆಕೆ ತಾನೂ ಫೋನ್ನಲ್ಲಿ ಮಾತನಾಡುವ ವೇಳೆ ಗಲಾಟೆ ಮಾಡಿದ ಎಂದು ತನ್ನ 2ನೇ ಮಗು ಆಸಿಫ್ ಅನ್ಸಾರಿಯನ್ನು ಕೊಂದಿದ್ದಾಳೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಗುವಿನ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ನಿರ್ದಯ ತಾಯಿ ಅಫ್ಸಾನಾ ಖಾತುನ್ ಎಂಬಾಕೆಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಬ್ಬಾರ್ ಅನ್ಸಾರಿ ಮಾತನಾಡಿ, ತಮ್ಮ ಪುತ್ರ ತಾಜುದ್ದೀನ್ ಅನ್ಸಾರಿ ಕಿವುಡ ಮತ್ತು ಮೂಗನಾಗಿದ್ದನೆ. ಆರು ವರ್ಷಗಳ ಹಿಂದೆ ಅಫ್ಸಾನಾ ಜೊತೆ ಮದುವೆ ಮಾಡಲಾಗಿತ್ತು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಘಟನೆ ನಡೆದ ದಿನ ರಾತ್ರಿ ಅವರ ಸೊಸೆ ತನ್ನ ಕಿರಿಯ ಮಗ ಆಸಿಫ್ನೊಂದಿಗೆ ಕೋಣೆಯಲ್ಲಿ ಮಲಗಿದ್ದಳು. ಹಿರಿಯ ಮಗ ಅಜ್ಜಿಯೊಂದಿಗೆ ಇದ್ದ. ಅವಳು ತನ್ನ ಗಂಡ ಜೊತೆ ಜಗಳ ಮಾಡಿಕೊಂಡು ತನ್ನ ಕೋಣೆಯಿಂದ ಹೊರಹಾಕಿದ್ದಳು.
ಆದರೆ ಸೊಸೆಗೆ ಊಟ ಮಾಡುವಂತೆ ಹೇಳಲು ಬಾಗಿಲು ತೆರೆಯಲು ಯತ್ನಿಸಿದರೂ ಆಕೆ ಬಾಗಿಲು ತೆರೆಯಲಿಲ್ಲ. ಸ್ವಲ್ಪ ಸಮಯದ ನಂತರ, ಅವಳು ಕೋಣೆಯನ್ನು ತೆರೆದು ತನ್ನ ಗಂಡನನ್ನು ಒಳಗೆ ಕರೆದಳು. ಪತಿ ಕೋಣೆಗೆ ತಲುಪಿದಾಗ, ಕಿರಿಯ ಮಗ ಸತ್ತಿರುವುದನ್ನು ಕಂಡು ಕಿರುಚಲು ಪ್ರಾರಂಭಿಸಿದ್ದಾನೆ. ಅಷ್ಟರಲ್ಲಿ ಕುಟುಂಬದ ಇತರ ಸದಸ್ಯರೂ ಬಂದಿದ್ದಾರೆ.
ಸ್ಥಳೀಯ ವೈದ್ಯರು ಮುಗ್ಧ ಮಗುವನ್ನು ಪರೀಕ್ಷಿಸಿದಾಗ ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪತಿಯೊಂದಿಗೆ ಜಗಳವಾಗಿದ್ದರಿಂದ ಆರೋಪಿ ತಾಯಿ ಕೋಪಗೊಂಡಿದ್ದಳು. ರಾತ್ರಿ ಮಗು ಅಳುತ್ತಿದ್ದಾಗ ಕೋಪದಲ್ಲಿ ಮಗುವಿನ ಕಪಾಳಕ್ಕೆ ಹೊಡೆದೆ, ಇದರಿಂದ ಮಗು ಹಾಸಿಗೆಯಿಂದ ಬಿದ್ದು ಸಾವನ್ನಪ್ಪಿದೆ. ನನಗೆ ಮಗುವನ್ನು ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾಳೆ. ಆದರೆ ಸೊಸೆ ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ಮಾವ ಆರೋಪಿಸಿದ್ದಾರೆ.