ಸುಳ್ಯ: ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಯೊಬ್ಬರಿಗೆ ಪುತ್ತೂರಿನಲ್ಲಿ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಪ್ರಕರಣ ದಲಿತ ಸಂಘಟನೆ ಪತ್ರಿಕಾಗೋಷ್ಟಿ ವೇಳೆ ಬೆಳಕಿಗೆ ಬಂದಿದೆ.
ಪುತ್ತೂರು ಬಪ್ಪಳಿಗೆ ಟೆಲಿಕಾಂ ವಸತಿಗೃಹದಲ್ಲಿ ವಾಸ್ತವ್ಯ ಹೊಂದಿರುವ ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಗಂಗಾಧರ್ ಹಲ್ಲೆ ಮತ್ತು ಜಾತಿ ನಿಂಧನೆ ದೂರು ನೀಡಿದ್ದಾರೆ. ಎ.ಎಸ್.ಐ ಗಂಗಾಧರ್ ಅವರು ಜ.೪ರಂದು ಕರ್ತವ್ಯ ಮುಗಿಸಿ ಮನೆಗೆ ಹೋಗಲೆಂದು ಪುತ್ತೂರಿಗೆ ಬಂದು ಮನೆಗೆ ಬೇಕಾದ ಸಾಮಾಗ್ರಿ ಖರೀದಿಸಿ, ನಂತರ ಮನೆಯಲ್ಲಿ ಸಂಬಂಧಿಕರಿಗೆ ಮದ್ಯ ಖರೀದಿಸಲು ವೈನ್ ಶಾಪ್ ಗೆ ಹೋಗಿದ್ದ ವೇಳೆ ಮದ್ಯದಂಗಡಿಯಲ್ಲಿದ್ದ ಪರಿಚಯದ ಪ್ರಸಾದ್ ಮತ್ತು ಪವನ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂಧನೆ ಮಾಡಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಎ.ಎಸ್.ಐ ಗಂಗಾಧರ್ ಅವರು ಕರ್ತವ್ಯ ಮುಗಿಸಿ ಮನೆಗೆ ಬರುವ ವೇಳೆ ವೈನ್ ಶಾಫ್ ಗೆ ಹೋಗುವುದನ್ನು ವಿಡಿಯೋ ಚಿತ್ರಿಕರಣ ಮಾಡಿರುವುದು ಪ್ರಶ್ನಿಸಿದ ವೇಳೆ ಪರಸ್ಪರ ಮಾತಿನಚಕಮಕಿ ನಡೆದು ಹಲ್ಲೆ ನಡೆದಿದೆ ಎನ್ನಲಾಗಿದೆ.