ನ್ಯೂಸ್ ನಾಟೌಟ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಲೋಕಸಭಾ ಅಧಿವೇಶನದಲ್ಲಿ ಆರೋಪಿಗಳು ಕಲರ್ ಸ್ಮೋಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಪ್ರಕರಣ ನಡೆದು ಇಷ್ಟು ಸಮಯವಾದ್ರೂ ಪ್ರತಾಪ್ ಸಿಂಹ ಯಾಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ದವು.ಅವರೊಬ್ಬ ದೇಶ ದ್ರೋಹಿ ಅನ್ನೋ ಚರ್ಚೆಯೂ ಶುರುವಾಗಿತ್ತು. ಇದೀಗ ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾತನಾಡುತ್ತಾ ‘ನಾನು ದೇಶ ದ್ರೋಹಿನೋ, ದೇಶ ಪ್ರೇಮಿನೋ, ರಾಷ್ಟ್ರವಾದಿನೋ ಎಂಬುದನ್ನು ತಾಯಿ ಚಾಮುಂಡೇಶ್ವರಿ, ಕಾವೇರಿ ಹಾಗೂ ಜನರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ‘ ಪ್ರತಾಪ್ ಸಿಂಹ ದೇಶ ದ್ರೋಹಿನೋ, ದೇಶ ಪ್ರೇಮಿನೋ ಎಂಬುವುದನ್ನು ಬೆಟ್ಟದಲ್ಲಿ ಕುಳಿತ ತಾಯಿ ಚಾಮುಂಡೇಶ್ವರಿ, ಬ್ರಹ್ಮಗಿರಿಯಲ್ಲಿ ಕುಳಿತ ಕಾವೇರಿ ತಾಯಿ, ನನ್ನ ಓದುಗ ಅಭಿಮಾನಿಗಳು ಹಾಗೂ ನನ್ನ ಕ್ಷೇತ್ರದ ಜನರು ತೀರ್ಮಾನ ನೀಡುತ್ತಾರೆ. ಎಲ್ಲರಿಗಿಂತಲೂ ಅಂತಿಮವಾಗಿ ತೀರ್ಮಾನ ಕೊಡೋರು ಜನರು. 2024ರ ಲೋಕಸಭೆ ಚುನಾವಣೆಯಲ್ಲಿ ಅದಕ್ಕೆ ಉತ್ತರ ಕೊಡುತ್ತಾರೆ. ಈ ಬಗ್ಗೆ ಎಲ್ಲಾ ತೀರ್ಮಾನವನ್ನೂ ಅವರಿಗೆ ಬಿಟ್ಟಿದ್ದೇನೆ. ಅದರ ಆಚೆಗೆ ನಾನೇನು ಹೇಳುವುದಕ್ಕೆ ಹೋಗಲ್ಲ’ ಎಂದು ಹೇಳಿದ್ದಾರೆ.
ಕಲಾಪದ ಒಳಗೆ ನುಗ್ಗಿದ್ದ ಮನೋರಂಜನ್ ಪರಿಚಯನಿದ್ದವನೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ಈಗ ಹೇಳಿದ್ದಿನಲ್ಲ, ಅದರ ಆಚೆಗೆ ನಾನು ಏನು ಹೇಳಲು ಬಯಸಲ್ಲ. ಮೈಸೂರು-ಕೊಡಗಿನ ಜನರು ಏಪ್ರಿಲ್ನಲ್ಲಿ ಅಂತಿಮ ನಿರ್ಧಾರ ಕೊಡುತ್ತಾರೆ ಎಂದು ಮೌನವಾದರು.