ನ್ಯೂಸ್ ನಾಟೌಟ್ : ಇಬ್ಬರು ವ್ಯಕ್ತಿಗಳು ಜ್ವರದಿಂದ ಬಳಲುತ್ತಿದ್ದರು.ಈ ಸಂದರ್ಭದಲ್ಲಿ ಶುಕ್ರವಾರದ ದಿನ ಸಮುದಾಯ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.ಆಗ ಅಲ್ಲಿ ಚಿಕಿತ್ಸೆಯೇನೋ ಸಿಗುತ್ತೆ,ಜ್ವರ ಕಡಿಮೆಯಾಗಿಲ್ಲಾಂದ್ರೆ ಶನಿವಾರ ರಕ್ತ ಪರೀಕ್ಷೆ ಮಾಡಿಸಬೇಕು ಎಂಬ ಉತ್ತರ ಸಿಗುತ್ತೆ.ಇದರಂತೆ ಶನಿವಾರ ಜ್ವರ ಕಡಿಮೆಯಾಗಿಲ್ಲವೆಂದು ಮತ್ತೆ ಆಸ್ಪತ್ರೆಗೆ ಹೋದಾಗ ನಾಲ್ಕನೇ ಶನಿವಾರ ಎಂಬ ಕಾರಣ ನೀಡಿ ವೈದ್ಯರೆಲ್ಲರೂ ರಜೆಯಲ್ಲಿದ್ದಾರೆ. ರವಿವಾರ, ಸೋಮವಾರದ ರಜೆಯನ್ನು ಕಳೆದು ಮಂಗಳವಾರದಂದು ಬನ್ನಿ ಎಂದು ರೋಗಿಗಳನ್ನು ಹಿಂದಕ್ಕೆ ಕಳುಹಿಸಿದ ಘಟನೆ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರದಿಂದ ವರದಿಯಾಗಿದೆ.
ಇಲ್ಲಿನ ಉಪಾಹಾರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉತ್ತರ ಭಾರತೀಯ ಕಾರ್ಮಿಕರಾದ ಶಮೀಂ ಹಾಗೂ ರಹೀಂ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರನ್ನು ಶುಕ್ರವಾರ ರಾತ್ರಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಲಾಗಿತ್ತು. ಜ್ವರ ಕಡಿಮೆಯಾಗದಿದ್ದರೆ ಶನಿವಾರ ರಕ್ತಪರೀಕ್ಷೆ ಮಾಡಿಸಬೇಕೆಂದು ಸೂಚಿಸಲಾಗಿತ್ತು.ಆದರೆ ಶನಿವಾರ ಆಸ್ಪತ್ರೆಗೆ ಬಂದಾಗ ಶನಿವಾರ ಎಂಬ ಕಾರಣ ನೀಡಿ ವೈದ್ಯರೆಲ್ಲರೂ ರಜೆಯಲ್ಲಿದ್ದಾರೆ. ರವಿವಾರ, ಸೋಮವಾರದ ರಜೆಯನ್ನು ಕಳೆದು ಮಂಗಳವಾರದಂದು ಬನ್ನಿ ಎನ್ನುವ ಉತ್ತರ ಸಿಕ್ಕಿದೆ.