ನ್ಯೂಸ್ ನಾಟೌಟ್: ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ 300ಕ್ಕೂ ಹೆಚ್ಚು ಮಂದಿ ಭಾರತೀಯರಿದ್ದ ನಿಕರಾಗುವ ಎಂಬಲ್ಲಿಗೆ ಹೋಗುತ್ತಿದ್ದ ವಿಮಾನವನ್ನು ಫ್ರಾನ್ಸ್ ತಡೆದ ಘಟನೆ ಇಂದು(ಡಿ.23) ನಡೆದಿದೆ.
ರೊಮಾನಿಯಾದ ಲೆಜೆಂಡ್ ಏರ್ ಲೈನ್ಸ್ ಕಂಪನಿಗೆ ಸೇರಿದ ಎ340 ವಿಮಾನವನ್ನು ವೆಟ್ರಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ವಿಮಾನದಲ್ಲಿ 303 ಭಾರತೀಯರು ಇದ್ದರು ಎಂದು ತಿಳಿದು ಬಂದಿದೆ.
ಅನಾಮಧೇಯ ಸುಳಿವನ್ನು ಆಧರಿಸಿ, ಮಾನವ ಕಳ್ಳಸಾಗಣೆಯ ಶಂಕೆಯಲ್ಲಿ ಸಂತ್ರಸ್ತರನ್ನು ವಿಮಾನ ವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ಯಾರೀಸ್ ಸಾರ್ವಜನಿಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿಮಾನ ಯುಎಇ ಯಿಂದ ತೆರಳುತ್ತಿತ್ತು ಎಂಬ ಮಾಹಿತಿ ದೊರೆದಿದೆ.
ಈ ಮಧ್ಯೆ ಫ್ರಾನ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿಕೆ ನೀಡಿ, ಶಂಕಿತ ಆರೋಪಿಗಳಿಗೆ ವಕೀಲರನ್ನು ನಿಯೋಜಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಫ್ರಾನ್ಸ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಎನ್ನಲಾಗಿದೆ.
ಬಹುತೇಕ ಭಾರತೀಯ ಮೂಲದ ಪ್ರಯಾಣಿಕರನ್ನು ಹೊಂದಿದ್ದ ಡಬ್ಲ್ಯು/3030 ವಿಮಾನ ದುಬೈನಿಂದ ನಿಕರಾಗುವಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಫ್ರಾನ್ಸ್ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಫ್ರಾನ್ಸ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ನಿಲುಗಡೆ ನೀಡಿ ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ. ಭಾರತೀಯ ರಾಯಭಾರ ಕಚೇರಿ ತಂಡ ಆಗಮಿಸಿ, ವಕೀಲರ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಎಲ್ಲ ಪ್ರಯಾಣಿಕರ ಯೋಗಕ್ಷೇಮವನ್ನು ಖಾತರಿಪಡಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.