ನ್ಯೂಸ್ ನಾಟೌಟ್ : ಸೀಮಾ ಹೈದರ್ ಎಷ್ಟರ ಮಟ್ಟಿಗೆ ಫೇಮಸ್ ಆಗಿದ್ದಾಳೆ ಅಂದ್ರೆ ವಿದ್ಯಾರ್ಥಿಗಳು ಎಕ್ಸಾಮ್ ಪೇಪರ್ನಲ್ಲಿಯೂ ಬರಿವಷ್ಟರ ಮಟ್ಟಿಗೂ ಆಕೆ ಪ್ರಸಿದ್ಧಳಾಗಿದ್ದಾಳೆ.ಅಂದ ಹಾಗೆ ಸೀಮಾ ಹೈದರ್ ಅಂದ್ರೆ ಯಾರು ಅಂತ ಹೇಳಬೇಕಾಗಿಲ್ಲ. ತನ್ನ ಪ್ರೇಮಿ ಸಚಿನ್ಗಾಗಿ ಪಾಕಿಸ್ತಾನದ ಗಡಿ ದಾಟಿ ಭಾರತಕ್ಕೆ ತನ್ನ ನಾಲ್ಕು ಮಕ್ಕಳೊಂದಿಗೆ ಬಂದಿರುವವಳು.ಈ ಮೂಲಕ ಬಾರಿ ಸುದ್ದಿಯಾದವಳು.ಇದೀಗ ಆಕೆ ಮತ್ತೊಮ್ಮೆ ಗಮನ ಸೆಳೆದಿದ್ದಾಳೆ. ಯಾಕೆ ಅಂತೀರಾ?
ಹೌದು,12ನೇ ತರಗತಿಯ ಪರೀಕ್ಷಾ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಸೀಮಾ ಹೈದರ್ ಉದಾಹರಣೆ ನೀಡಿದ್ದಾನೆ ಯಾಕೆ ಗೊತ್ತಾ? ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಶಾಲೆಯೊಂದರಲ್ಲಿ ರಾಜ್ಯಶಾಸ್ತ್ರ ಪತ್ರಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಮತ್ತು ಅದರ ಉದ್ದದ ಬಗ್ಗೆ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ, ಭಾರತ ಮತ್ತು ಪಾಕಿಸ್ತಾನದ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು ಎಂದು ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ.
ಈಗ, ಉತ್ತರ ಪತ್ರಿಕೆ ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿದೆ. ಇದು ಧೋಲ್ಪುರ್ ಜಿಲ್ಲೆಯ ಬಸೇರಿಯಲ್ಲಿರುವ ಬಗ್ತಾರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ ಬಂದಿದೆ ಎಂದು ಹೇಳಲಾಗುತ್ತದೆ.ಈ ವರ್ಷದ ಆರಂಭದಲ್ಲಿ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸೀಮಾ ಹೈದರ್, ತಾನು ತನ್ನ ಧರ್ಮವನ್ನು ಪರಿವರ್ತಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ ಮತ್ತು ಈಗ ಸನಾತನ ಧರ್ಮವನ್ನು ಅನುಸರಿಸುತ್ತಿದ್ದಾಳೆ. ತನ್ನ ಮಕ್ಕಳ ಹೆಸರನ್ನೂ ಬದಲಾಯಿಸಿದಳು. ಪಾಕಿಸ್ತಾನಿ ಪ್ರಜೆಯಾಗಿರುವ ಸೀಮಾ ಹೈದರ್ ಕಳೆದ ತಿಂಗಳಷ್ಟೇ ಭಾರತೀಯ ಪತಿ ಸಚಿನ್ ಜೊತೆ ತನ್ನ ಮೊದಲ ‘ಕರ್ವಾ ಚೌತ್’ ಅನ್ನು ಆಚರಿಸಿ ಸುದ್ದಿಯಲ್ಲಿದ್ದಳು. ಈ ಹಿಂದೆ ಸೀಮಾ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದ ಧ್ವಜಾರೋಹಣ ಮಾಡಿ ಸುದ್ದಿ ಮಾಡಿದ್ದಳು.