ನ್ಯೂಸ್ ನಾಟೌಟ್ :ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡವೋ ಏನೋ .. ಮದ್ಯಪಾನಕ್ಕೊಳಗಾದವರ ಸಂಖ್ಯೆ ಜಾಸ್ತಿಯಾಗಿ ಬಿಟ್ಟಿದೆ.ಖುಷಿ ಹೆಚ್ಚಾದ್ರೂ ಎಣ್ಣೆ ಬೇಕು… ಬೇಜಾರಾದ್ರೂ ಕೂಡ ಎಣ್ಣೆ ಬೇಕು..ಬಹಳ ಮುಖ್ಯವಾಗಿ ಚಳಿ ವಾತಾವರಣದಲ್ಲಿ ಇದನ್ನು ಸೇವಿಸುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತದೆ. ಹಾಗಾದರೆ ಇದರ ಸೇವನೆಯಿಂದ ಆರೋಗ್ಯಕ್ಕೆ ಆಗುವ ನಷ್ಟಗಳೇನು? ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಮದ್ಯ ಸೇವಿಸಬೇಕು ಎಂಬುದರ ವರದಿ ಬಹಿರಂಗಗೊಂಡಿದೆ. ಹಾಗಾದರೆ ಪ್ರತಿದಿನ ಎಷ್ಟು ಮದ್ಯ ಸೇವಿಸಬೇಕು ಎಂಬುದರ ವರದಿ ಇಲ್ಲಿದೆ ಓದಿ..
WHO ವರದಿಯ ಪ್ರಕಾರ, ಸ್ವಲ್ಪ ಮದ್ಯ ಸೇವನೆ ಕೂಡ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯೇ..ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷ ಒಂದು ವರದಿಯನ್ನು ಬಿಡುಗಡೆ ಮಾಡಿತ್ತು.ಇದು ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಮದ್ಯಪಾನ ಮಾಡಬೇಕು ಎಂಬುದನ್ನು ಬಹಿರಂಗಪಡಿಸಿದೆ. ಹೌದು, ಅಲ್ಪ ಪ್ರಮಾಣದ ಆಲ್ಕೊಹಾಲ್ಯುಕ್ತ ಪಾನೀಯಗಳ ಸೇವನೆಯು ವ್ಯಕ್ತಿಯ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಜನರು ಮದ್ಯ ಸೇವಿಸಲೇಬಾರದು. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಲೆಕ್ಕಾಚಾರದಲ್ಲಿ ಇನ್ನು ಬಹಳಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅದರ ಪ್ರಕಾರ, ಒಂದು ಅಥವಾ ಎರಡು ಪೆಗ್ ಏನೂ ಮಾಡುವುದಿಲ್ಲ ಎಂದು ಭಾವಿಸುವವರು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಮದ್ಯ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ ಅಲ್ಲ ಅನ್ನೋದನ್ನು ಹೇಳಿದೆ.
ಮಾಹಿತಿ ಪ್ರಕಾರ ನೋಡೋದಾದ್ರೆ, ಆಲ್ಕೋಹಾಲ್ ಸೇವನೆಯು ಕ್ಯಾನ್ಸರ್ ಮತ್ತು ಯಕೃತ್ತಿನ ವೈಫಲ್ಯದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವರದಿ ತಿಳಿಸಿದೆ. ಫಸ್ಟ್ ಡ್ರಾಪ್ ಆಲ್ಕೋಹಾಲ್ ಕೂಡ ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮದ್ಯದಲ್ಲಿ ಒಂದು ರೀತಿಯ ವಿಷಕಾರಿ ವಸ್ತುವಿರುತ್ತದೆ. ಇದು ದೇಹಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಲಾಗಿದೆ.
ವರ್ಷಗಳ ಹಿಂದೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ಗ್ರೂಪ್ 1 ಕಾರ್ಸಿನೋಜೆನ್ನಲ್ಲಿ ಆಲ್ಕೋಹಾಲ್ ಅನ್ನು ಸೇರಿಸಿದೆ. ಮದ್ಯ ಮಾತ್ರವಲ್ಲ,ಈ ಅಪಾಯಕಾರಿ ಗ್ರೂಪ್ನಲ್ಲಿ ಕಲ್ನಾರು, ವಿಕಿರಣ ಮತ್ತು ತಂಬಾಕು ಕೂಡ ಸೇರಿದೆ. ಈ ವರದಿಯ ಪ್ರಕಾರ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಟೈಪ್ 2 ಡಯಾಬಿಟಿಸ್ಗೆ ಮದ್ಯಪಾನವು ಪ್ರಯೋಜನಕಾರಿ ಎಂದು ಯಾವುದೇ ಅಧ್ಯಯನಗಳಲ್ಲಿ ಕಂಡುಬಂದಿಲ್ಲ.